ಮೈಸೂರು

ಅ.29 : ರಾಷ್ಟ್ರೀಯ ಚಾಂಪಿಯನ್ ಶಿಪ್ ಡಾಗ್ ಶೋ

ಮೈಸೂರು,ಅ.25:- ಕೆನೈನ್ ಕ್ಲಬ್ ಆಫ್ ಮೈಸೂರು ವತಿಯಿಂದ ಅ.29ರಂದು ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿ ರಾಷ್ಟ್ರೀಯ ಚಾಂಪಿಯನ್ ಶಿಪ್ ಡಾಗ್ ಶೋ ಏರ್ಪಡಿಸಲಾಗಿದೆ.

ಮೈಸೂರು ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಬಿ.ಪಿ.ಮಂಜುನಾಥ್  ಮಾತನಾಡಿ ಅ.29ರಂದು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಶೋ ನಡೆಯಲಿದೆ. ಗೆದ್ದ ಶ್ವಾನಗಳಿಗೆ ಚಾಂಪಿಯನ್ ಶಿಪ್ ಟ್ರೋಫಿ ನೀಡಲಾಗುವುದು ಎಂದರು. ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಹೊರದೇಶದಿಂದ ಭಾರಕ್ಕೆ ಬಂದಿರುವ ತಳಿಗಳಾದ ನ್ಯೂಫೌಂಡ್ ಲ್ಯಾಂಡ್, ಟಿಬೇಟಿಯನ್ ಬುಲ್ಲಿ, ಚೌ ಚೌ, ಅಮೇರಿಕನ್ ಪಿಟ್ ಬುಲ್, ಜಿಎಸ್ ಡಿ, ಗ್ರೇಟ್ ಡೇನ್ ಭಾಗವಹಿಸಲಿದೆ. ಮೂರು ಕೆ.ಜಿ.ತೂಕವಿರುವ  ಮಿನಿ ಎಚ್ಚರ್ ಪಿಂಚರ್ ನಿಂದ ನೂರಕ್ಕೂ ಹೆಚ್ಚು ಕೆ.ಜಿ.ತೂಕವಿರುವ ಸೇಂಟ್ ಬರ್ನಾರ್ಡ್, ಗ್ರೇಟ್ ಡೇನ್, ಟಿಬೇಟಿಯನ್ ಮ್ಯಾಸ್ಥಿಫ್, ನಿಯೋಪೊಲಿಟೆನ್ ಮ್ಯಾಸ್ಥಿಫ್, ಜರ್ಮನ್ ಶೆಫರ್ಡ್, ಲ್ಯಾಬರ್ ಡಾಗ್, ಗೋಲ್ಡನ್ ರಿಟ್ ರಿವರ್, ಮಿನಿಯೇಚರ್ ಪಿಂಚರ್, ಬಾಕ್ಸರ್, ಗ್ರೇಡ್ ಡೇನ್, ಡಾಬರ್ ಮೆನ್, ಪಗ್, ಲ್ಯಾಸಾಪ್ಸ್, ಇಂಗ್ಲಿಷ್ ಮ್ಯಾಸ್ಥಿಫ್, ಬೀಗಲ್, ಪೂಡಲ್ ಸೇರಿದಂತೆ 300ಕ್ಕೂ ಹೆಚ್ಚು ಶ್ವಾನಗಳು ದೇಶದ ಎಲ್ಲೆಡೆಯಿಂದ ಬರಲಿದೆ. ಈ ಬಾರಿಯ ವಿಶೇಷತೆಯಾಗಿ ಬೆಸ್ಟ್ ಆಫ್ ಬ್ರೀಡ್, ಬೆಸ್ಟ್, ಪಪ್ಪಿ ಇನ್ ಶೋ, ಗ್ರೂಪ್ ವಿನ್ನರ್ ಮತ್ತು ಬೆಸ್ಟ್ ಇನ್ ಶೋ ಶ್ವಾನಗಳಿಗೆ ಟ್ರೋಫಿ  ನೀಡಲಾಗುವುದು. ನಮ್ಮ ದೇಶದ ತಳಿಗಳಾದ ಮುಧೋಳ್, ರಾಜಪಾಳ್ಯಂ, ಚಿಪ್ಪಿವರಿ, ಕನ್ನಿ ಕ್ಯಾರವಾನ್ ಹೌಲ್ಡ್, ಪಶ್ಮಿ, ಮುಂತಾದ ಶ್ವಾನಗಳು ಪ್ರದರ್ಶನಗೊಳ್ಳುತ್ತಿವೆ. ನಮ್ಮ ದೇಶದ ತಳಿಗಳಿಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದವರು ರಿಂಗ್ ಪ್ರಾಯೋಜಕತ್ವ ನೀಡಲಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಪೋಸ್ಟರ್ ನ್ನು ಬಿಡುಗಡೆಗೊಳಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿಗಳಾದ ಟಿ.ಶಶಿಕುಮಾರ್, ಜಪೆತ್ ಮೆನ್ಯುವಲ್, ಎಂ.ಹೆಚ್.ತೇಜಸ್ವಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: