ಮೈಸೂರು

ಯುವಜನತೆ ಸಾಹಿತ್ಯಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ : ಸಿ.ಕೆ.ಎನ್.ರಾಜ ಸಲಹೆ

ಯುವಜನತೆ ಸಾಹಿತ್ಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕನ್ನಡದಲ್ಲಿ ಹೆಚ್ಚೆಚ್ಚು ಸಾಹಿತ್ಯಗಳು ಬರುವಂತಾಗಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸಿ.ಕೆ.ಎನ್ ರಾಜ ಹೇಳಿದರು.

ಮೈಸೂರಿನ ಸಿಐಎಲ್ ಸಭಾಂಗಣದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡು ಪ್ರೊ.ಸಿ.ಕೆ.ಎನ್ ರಾಜ ಮಾತಾನಾಡಿದರು.

ಹಿರಿಯ ಸಾಹಿತ್ಯ ರಚನಾಕಾರರ ಮಾರ್ಗದರ್ಶನದಲ್ಲಿ ಯುವಜನತೆ ಕನ್ನಡ ಸಾಹಿತ್ಯಕ್ಕೆ ಇನ್ನಷ್ಟು ಕೊಡುಗೆ ನೀಡುವಂತಾಗಿ ಎಂದು ಸಲಹೆ ನೀಡಿದರು. ಪ್ರತಿಯೊಬ್ಬರ ಜೀವನದಲ್ಲಿಯೂ ಸಂಸ್ಕೃತಿ ಮಹತ್ವವಿದೆ. ಇಷ್ಟುದಿನ ನೀರು ಮತ್ತು ಗಾಳಿ ಮಾತ್ರ ಕಲುಷಿತಗೊಂಡಿದೆ ಅಂದುಕೊಂಡಿದ್ದೆವು. ಆದರೆ ಸಂಸ್ಕೃತಿಯೂ ಕಲುಷಿತಗೊಂಡಿದೆ. ಇದಕ್ಕೆ ಮುಖ್ಯ ಕಾರಣ ವಾಹಿನಿಗಳಲ್ಲಿ ಪ್ರಸಾರವಾಗುವ ಅರ್ಥವಿಲ್ಲದ ಧಾರವಾಹಿಗಳು ಮತ್ತು ರಿಯಾಲಿಟಿ ಶೋಗಳಾಗಿವೆ. ಎಂದರಲ್ಲದೇ ಯುವ ಜನತೆ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ನಿರಾಸಕ್ತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಸಿಐಐಎಲ್ ನಿರ್ದೇಶಕ ಪ್ರೊ.ಡಿ.ಜಿ.ರಾವ್, ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಪಿ.ಕೆ.ಖಂಡೋಬಾ, ಡಾ.ನಾರಾಯಣ ಕುಮಾರ್ ಚೌಧರಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: