ಲೈಫ್ & ಸ್ಟೈಲ್

ತಲೆಹೊಟ್ಟಿಗೆ ವಯಸ್ಸಿನ ಭೇದವಿಲ್ಲ : ತಲೆಹೊಟ್ಟಿಗಿಲ್ಲಿದೆ ಸರಳ ಮನೆಮದ್ದು

ತಲೆಹೊಟ್ಟು ಇಂತಹದ್ದೇ ವಯಸ್ಸಿರಬೇಕಂತೆನಿಲ್ಲ. ಎಲ್ಲ ವಯಸ್ಸಿನವರನ್ನೂ ಕಾಡುವಂತಹ ಸಮಸ್ಯೆ. ಸಾಮಾನ್ಯವಾಗಿ ಅನೇಕ ಸಾರಿ ತಲೆಹೊಟ್ಟು ಮುಜುಗುರಕ್ಕೀಡು ಮಾಡುವ ಸಾಧ್ಯತೆ ಇದೆ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಕೆಲವೊಂದು ಸರಳ ಮನೆಮದ್ದುಗಳಿವೆ.
ಪುದೀನಾ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ತುರಿಕೆಯನ್ನು ಕಮ್ಮಿ ಮಾಡುವುದರ ಜೊತೆಗೆ ತಣ್ಣನೆಯ ಅನುಭವವಾಗುತ್ತದೆ. ಹಾಗೂ ತಲೆ ಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.pudina benefits for hair ಗೆ ಚಿತ್ರದ ಫಲಿತಾಂಶ
ಆಲೀವ್ ಎಣ್ಣೆಗೆ ಈರುಳ್ಳಿ ರಸವನ್ನು ಮಿಶ್ರಣ ಮಾಡಿ ತೆಲೆಗೆ ಹಾಗೂ ಕೂದಲಿಗೆ ಹಚ್ಚುವುರಿಂದ ತಲೆಹೊಟ್ಟಿನಿಂದ ದೂರವಿರಬಹುದು. ಸಂಬಂಧಿತ ಚಿತ್ರ
ರಾತ್ರಿಯೆಲ್ಲ ನೆನೆ ಹಾಕಿದ ಮೆಂತೆ ಕಾಳುಗಳನ್ನು ಪೇಸ್ಟ್ ಮಾಡಿಕೊಂಡು ಅದಕ್ಕೆ ಒಂದು ಚಮಚ ಲಿಂಬೆರಸ ಬೆರೆಸಿ ಕೂದಲಿನ ಬುಡಕ್ಕೆ ಲೇಪಿಸುವುಚರಿಂದ ತಲೆಹೊಟ್ಟು ಮಾಯವಾಗುತ್ತದೆ.ಸಂಬಂಧಿತ ಚಿತ್ರ
ಬಿಸಿಮಾಡಿದ ಕೊಬ್ಬರಿ ಎಣ್ಣೆ ದಾಸವಾಳ ಹೂವಿನ ದಳಗಳ, ನೆಲ್ಲಿಕಾಯಿ ಮತ್ತು ತುಳಸಿ ಎಲೆಗಳನ್ನು ಸಣ್ಣ ಉರಿಯಲ್ಲಿ ಕುದಿಯಲು ಹೂವಿನ ದಳಗಳು ಕರಗುವ ತನಕ ಬೇಯಿಸಿ ಸ್ಪಲ್ವ ತಣ್ಣಗಾದ ಬಳಿಕ ತಲೆಯ ಬುಡಕ್ಕೆ ಹಚ್ಚುವುದರಿಂದ ಉತ್ತಮ ಫಲಿತಾಂಶವನ್ನು ಕಾಣಬಹುದು.
ನೆನೆದಿರುವ ಮೆಂತೆ ಕಾಳಿಗೆ ಬೇವಿನ ಎಲೆ ಹಾಕಿ ಮೃದುವಾಗಿ ಪೇಸ್ಟ್ ಮಾಡಿ. ನಿಂಬೆರಸ ಮತ್ತು ಮೊಸರು ಹಾಕಿ ನಂತರ ಕೂದಲಿಗೆ ಹಚ್ಚಿಕೊಂಡು ಒಂದು ಗಂಟೆ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ. ತಿಂಗಳಿಗೆ 4 ಭಾರಿ ಹೀಗೆ ಮಾಡುವುದರಿಂದ ಹೊಟ್ಟುರಹಿತ ಕೇಶ ನಿಮ್ಮದಾಗುತ್ತದೆ.hair care dandruff ಗೆ ಚಿತ್ರದ ಫಲಿತಾಂಶ
ಗೊರಂಟಿ ಎಲೆಗಳಿಗೆ ಸಾಸಿವೆ ಎಣ್ಣೆ ಮತ್ತು ಮೊಸರನ್ನು ಬೆರೆಸಿ ಮಿಶ್ರಣ ಮಾಡಿ ತಲೆಯ ಭಾಗದ ಚರ್ಮಕ್ಕೆ ಹಚ್ಚಿ ಸ್ವಲ್ಪ ಸಮಯದ ಬಳಿಕ ಸ್ವಚ್ಛಗೊಳಿಸುವುದರಿಂದ ಕೂದಲು ಹೆಚ್ಚು ನಳನಳಿಸುತ್ತದೆ.ಸಂಬಂಧಿತ ಚಿತ್ರ
ಕೊತ್ತಂಬರಿ ಎಲೆಗಳನ್ನು ಪೇಸ್ಟ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ಅರ್ಧ ಘಂಟೆಯ ನಂತರ ಬೆಚ್ಚನೆಯ ನೀರಿನಿಂದ ತೊಳೆದರೆ ನಿಮ್ಮ ಕೇಶವು ಸದೃಢಗೊಂಡು ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗಲಿದೆ. (ಪಿ.ಎಸ್)

Leave a Reply

comments

Related Articles

error: