ಕರ್ನಾಟಕ

ಫೇಸ್ ಬುಕ್ ನಲ್ಲಿ ಪ್ರಧಾನಿಗೆ ಜೀವ ಬೆದರಿಕೆ : ದಿನೇಶ್ ಅಮೀನುಮಟ್ಟು ವಿರುದ್ಧ ಪ್ರಕರಣ ದಾಖಲು

ಎನ್ಡಿಟಿವಿಗೆ ಕೇಂದ್ರ ಸರ್ಕಾರ ಒಂದು ದಿನದ ನಿಷೇಧ ಹೇರಿರುವುದಕ್ಕೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನಮಟ್ಟು ಅವರು ವಿರುದ್ಧ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವರು, ಇಂದಿರಾ ಗಾಂಧಿ ಕೊನೆ ಹೇಗಾಯಿತು ಎಂದು ಗೊತ್ತಲ್ಲ. ನಿಮ್ಮ  ಮೋದಿ ಅವರ ಜತೆಯೂ ಆಗಬೇಕು ಎನ್ನುವುದು ನಿಮ್ಮ ಅಸೆಯೇ ಎಂದು ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ದೂರು ನೀಡಿದ್ದು ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರ ಮೇಲೆ ಹಲ್ಲೆ ಹಾಗೂ ಕೊಲೆಗಳು ನಿರಂತರವಾಗಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಇಂತಹ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ದೂರಿನಲ್ಲಿ ತಿಳಿಸಿದೆ.

Leave a Reply

comments

Related Articles

error: