ಕರ್ನಾಟಕ

6ನೇ ವೇತನ ಆಯೋಗದ ಶಿಫಾರಸು ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನೆ

ರಾಜ್ಯ(ಚಾಮರಾಜನಗರ) ಅ,26- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಕೇಂದ್ರ ಸರ್ಕಾರದ 6ನೇ ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ರಾಜ್ಯ ಸರ್ಕಾರಿ ನೌಕರರಿಗೆ ಅನುಷ್ಠಾನಗೊಳಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳಲ್ಲಿ ಸರಿಸಮಾನತೆಯನ್ನು ಮೂಡಿಸುವ ಏಕೈಕ ಬೇಡಿಕೆಯನ್ನು  ವರ್ಷದ ನವಂಬರ್ ಅಂತ್ಯದ ಒಳಗೆ ಘೋಷಣೆ ಮಾಡಬೇಕೆಂದು ಆಗ್ರಹಿಸಿ  ಸರ್ಕಾರಿ ನೌಕರರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.

ಚಾಮರಾಜನಗರ ಜಿಲ್ಲಾ ಸರ್ಕಾರಿ ನೌಕರರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನಡೆದ    ಪ್ರತಿಭನೆಯಲ್ಲಿ ಮಾತನಾಡುತ್ತಿದ್ದರು. ಸರ್ಕಾರಕ್ಕೆ ಮನವಿ ಮಂಡಿಸಿದ್ದ ಸಂದರ್ಭದಲ್ಲಿ ತಾವು ಶಾಸಕಾಂಗ ಹಾಗೂ ಕಾರ್ಯಾಂಗಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಪ್ರತಿಪಾದಿಸಿ, ಒಂದೇ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳಲ್ಲಿ ಸಮಾನತೆಯನ್ನು ಮೂಡಿಸುವುದು ಹಾಗೂ ‘ ಸಮಾನ ಕೆಲಸಕ್ಕೆ ಸಮಾನ ವೇತನ’ ತತ್ವವನ್ನು ಪ್ರತಿಪಾದಿಸಿ ಕಾರ್ಯಾಂಗದ ಆಧಾರ ಸ್ಥಂಭಗಳಾದ ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗೆ ಸ್ಪಂದಿಸಿ, ರಾಜ್ಯ ಸರ್ಕಾರಿ ನೌಕರಿಗೆ ವೇತನ ಆಯೋಗವನ್ನು ರಚಿಸಿ ನಾಲ್ಕು ತಿಂಗಳ ಅವಧಿಯೊಳಗೆ ಆಯೋಗವು ತನ್ನ ಅಂತಿಮ ವರದಿಯನ್ನು ಸಲ್ಲಿಸಬೇಕೆಂದು ಮುಖ್ಯ ಮಂತ್ರಿಗಳು ತಿಳಿಸಿದ್ದರು ಆದರೆ ವೇತನ ಆಯೋಗವು ಕಾಲಾವಧಿಯನ್ನು ವಿಸ್ತರಿಸಿಕೊಂಡಿರುವ ಹಿನ್ನೆಲೆ ಹಾಗೂ ರಾಜ್ಯದಲ್ಲಿ ಈ ಹಿಂದೆ ರಚಿತವಾದ ವೇತನ ಆಯೋಗ/ ಸಮಿತಿಗಳು ಅನುಸರಿಸಿರುವ ಸಂಪ್ರದಾಯದಂತೆ ಇಂದು ರಾಜ್ಯ ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರ ಮಂಜೂರು ಮಾಡುವ ಸಕಾಲ ಹಾಗೂ ಅನಿವಾರ್ಯತೆ ಉದ್ಭವಿಸಿದ್ದು, ಅದರಿಂದ  ದಿನಾಂಕ:1-4-2017ರಿಂದ ಶೇ.30ರಷ್ಟು ಮಧ್ಯಂತರ ಪರಿಹಾರ ಅಕ್ಟೋಬರ್ ಅಂತ್ಯದೊಳಗೆ ಮಂಜೂರು ಮಾಡಬೇಕೆಂದು ಸಂಘವು ಒತ್ತಾಯುಸುತ್ತಿದೆ ಎಂದು ರಾಚಪ್ಪ ತಿಳಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ ಮಾತನಾಡಿ  ಪ್ರಸ್ತುತ ಕೇಂದ್ರ ಸರ್ಕಾರವು ಕನಿಷ್ಠ ವೇತನವನ್ನು ರೂ. 18,000-00ಗಳಿಗೆ ಹಾಗೂ ಗರಿಷ್ಠ ವೇತನವನ್ನು ರೂ. 2,50,000-00ಗಳಿಗೆ ನಿಗದಿಪಡಿಸಿದೆ. ಎಲ್ಲಾ ವೇತನ ಶ್ರೇಣಿಗಳಿಗೂ ಒಂದಿಲ್ಲೊಂದು ರೀತಿಯ ವಿಶೇಷ ಭತ್ಯೆಗಳನ್ನು ನೀಡಿದ್ದು, ಅನೇಕ ರಾಜ್ಯಗಳು ತನ್ನ ನೌಕರರ ಹಿತಾಶಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಹೊಂದಿರುವ ಸಕಾರಾತ್ಮಕ ಧೋರಣೆಗೆ ನಿದರ್ಶನವಾಗಿರುತ್ತದೆ. ಮಹಾರಾಷ್ಟ್ರ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳು ಕೇಂದ್ರದ 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರತ್ಯೇಕವಾದ ಆಯೋಗ ರಚಿಸಿವೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರು ಹಲವು ವರ್ಷಗಳಿಂದ ಅನುಭವಿಸಿರುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ದಿನಾಂಕ 1-4-2017ರಿಂದ ಪೂರ್ವಾನ್ವಯವಾಗಿ ಮೂಲವೇತನದ ಶೇ. 30ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಬೇಕು ಎಮದು ಒತ್ತಾಯಿಸಿದರು. (ಆರ್.ವಿ.ಎಸ್,ಎಸ್.ಎಚ್)

Leave a Reply

comments

Related Articles

error: