ಪ್ರಮುಖ ಸುದ್ದಿಮೈಸೂರು

ಕೋರ್ಟ್‍ಗೆ ಹಾಜರಾದ ಮಹದೇಶ್: ಸದಸ್ಯತ್ವ ಕಳೆದುಕೊಳ್ಳುವ ಸಾಧ್ಯತೆ

ಹುಣಸೂರು ಜೋಡಿ ಪ್ರಕರಣದ ಆರೋಪಿಯಾಗಿರುವ ಮೈಸೂರು ನಗರ ಪಾಲಿಕೆಯ ಕಾರ್ಪೊರೇಟರ್ ಸಿ.ಮಹದೇಶ್ ಅಲಿಯಾಸ್ ಅವ್ವ ಮಾದೇಶ್ ಮಂಗಳವಾರದಂದು ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಎರಡನೇ ಹಂತದ ವಿಚಾರಣೆಗೆ ಹಾಜರಾದರು.

ಅವ್ವ ಮಾದೇಶ ಅವರನ್ನು ಪೊಲೀಸ್ ಬಿಗಿ ಭದ್ರತೆಯೊಂದಿಗೆ ಕೋರ್ಟ್‍ಗೆ ಕರೆತರಲಾಯಿತು. ಪಡುವಾರಹಳ್ಳಿಯಲ್ಲಿ ಮೇ 5 ರಂದು ನಡೆದ ದೇವೇಂದ್ರ ಅಲಿಯಾಸ್ ದೇವು ಕೊಲೆ ಪ್ರಕರಣದ ಎಲ್ಲ ಆರೋಪಿಗಳ ಮೇಲೆ ಪೊಲೀಸರು 7,500 ಪುಟಗಳ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದಾರೆ. ಕೋರ್ಟ್‍ಗೆ ಹಾಜರುಪಡಿಸಿದ 24 ಮಂದಿಯಲ್ಲಿ 8 ಮಂದಿ(ಮಹದೇಶ್ ಮತ್ತು ಮಂಜು) ಹುಣಸೂರು ಜೋಡಿ ಕೊಲೆ ಆರೋಪಿಗಳು.

ಮಹದೇಶ್ ನಗರಕ್ಕೆ ಆಗಮಿಸಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ನೂರಾರು ಜನರು ಕೋರ್ಟ್ ಸಮೀಪ ಜಮಾಯಿಸಿದ್ದರು.

ಮಹದೇಶ್ ಅವರ ಪಾಲಿಕೆ ಸದಸ್ಯತ್ವ ಬುಧವಾರದಂದು ರದ್ದಾಗಲಿದೆ ಎಂಬ ಮಾತುಗಳು ಕೇಳೀಬಂದಿವೆ. ಮಹದೇಶ್ ಅವರು 2013ರಲ್ಲಿ ಪಡುವಾರಹಳ್ಳಿ ವಾರ್ಡ್‍ನಿಂದ ಎರಡನೇ ಬಾರಿಗೆ ಮೈಸೂರು ನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು.

Leave a Reply

comments

Related Articles

error: