ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಪೂರ್ವಬಾವಿ ಸಭೆ

ಮೈಸೂರು,ಅ.26:- ಮೈಸೂರಿನ ಹೋಟೆಲ್ ಲಿ ರುಚಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಪೂರ್ವಬಾವಿ ಸಭೆ ನಡೆಯುತ್ತಿದೆ.

ನವೆಂಬರ್ 3 ರಂದು ನಡೆಯಲಿರುವ ಜೆಡಿಎಸ್ ಬೃಹತ್‌ ಸಮಾವೇಶ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ಜೆಡಿಎಸ್ ನಡಿಗೆ ಜನರ ಮನದೆಡೆಗೆ ಕಾರ್ಯವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. 2018ರ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಕುಮಾರ ಪರ್ವ ಪ್ರಾರಂಭವಾಗಲಿದ್ದು, ಅಂದು ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಹಿನಕಲ್ ನ ನನ್ನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬೃಹತ್ ಮೆರವಣಿಗೆ ಮುಖೇನ ಲಿಂಗದೇವರಕೊಪ್ಪಲುವಿನಲ್ಲಿ ನಡೆಯಲಿರುವ ಬೃಹತ್ ಸಮಾವೇಶ ಉದ್ಗಾಟಿಸಲಿದ್ದಾರೆ ಸುಮಾರು ಇಪತ್ತೈದು ಸಾವಿರ ಕಾರ್ಯಕರ್ತರು ಸೇರಲಿದ್ದಾರೆ ಎಂದು ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: