ನಮ್ಮೂರು

ಮೈಸೂರು ವಿಭಾಗದಲ್ಲಿ 18 ಗೋಶಾಲೆಗಳನ್ನು ತೆರೆಯಲಾಗುವುದು : ಸಚಿವ ಎ.ಮಂಜು

ಮೈಸೂರು ವಿಭಾಗದಲ್ಲಿ ಒಟ್ಟು 18 ಗೋಶಾಲೆಗಳು ಮತ್ತು 38 ಮೇವಿನ ಬ್ಯಾಂಕ್ ಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಖಾತೆ ಸಚಿವ ಎ.ಮಂಜು ತಿಳಿಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಎ.ಮಂಜು ಮಾತನಾಡಿ  ಎಂಟು ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಆರು ಜಿಲ್ಲೆಗಳ ಎಲ್ಲಾ ತಾಲೂಕುಗಳು ಬರಪೀಡಿತ ಎಂದು ಘೋಷಿಸಲ್ಪಟ್ಟಿವೆ. ಸದರಿ ಬರಪೀಡಿತ ಜಿಲ್ಲೆಗಳಲ್ಲಿ ಮುಂದಿನ 16ವಾರಗಳಿಗೆ ಬೇಕಾಗುವಷ್ಟು ಮೇವಿನ ಲಭ್ಯತೆ ಇದೆ ಎಂದರು.

ವಿಭಾಗದ 6 ಜಿಲ್ಲೆಗಳಲ್ಲಿ ಒಟ್ಟು 2583.42 ಲಕ್ಷಗಳ ಕ್ರಿಯಾಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. 2015-16ನೇ ಸಾಲಿನಲ್ಲಿ ಆಕಸ್ಮಿಕವಾಗಿ ಮರಣಿಸಿದ ಕುರಿ-ಮೇಕೆಗಳಿಗೆ ವಿಭಾಗದ ಒಟ್ಟು 1554 ಕುರಿ-ಮೇಕೆಗಳಿಗೆ 77.70ಲಕ್ಷರೂ. ಸಹಾಯಧನವನ್ನು ವಿತರಿಸಲಾಗಿದೆ. 2016-17ನೇ ಸಾಲಿನಲ್ಲಿ ಒಟ್ಟು 11055 ಗಿರಿರಾಜ ಕೋಳಿ ಮರಿಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಮೈಸೂರು ನಗರಕ್ಕೆ ಒಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಮಂಜೂರಾಗಿದ್ದು, 3.40ಕೋಟಿ ರೂ.ಅನುದಾನ ನಿಗದಿಯಾಗಿದ್ದು, ಸದ್ಯದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು. ಆರ್.ಐ.ಡಿ.ಎಫ್ ಯೋಜನೆಯಡಿ 283 ಇಲಾಖಾ ಸಂಸ್ಥೆಗಳಿಗೆ ಹೊಸಕಟ್ಟಡ ಕಾಮಗಾರಿಗೆ ಮಂಜೂರಾತಿ ನೀಡಲಾಗಿದ್ದು, 145 ಪಶುವೈದ್ಯ ಸಂಸ್ಥೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿನ ಎಂಟು ಜಿಲ್ಲೆಗಳಲ್ಲಿ 2016-17ನೇ ಸಾಲಿನಲ್ಲಿ ಪಶುಭಾಗ್ಯ ಯೋಜನೆಯಡಿ 3,769 ಹಸು ಘಟಕ, 310 ಕುರಿ ಮತ್ತು ಮೇಕೆ ಘಟಕ 92 ಹಂದಿ ಘಟಕ, 280 ಕೋಳಿ ಘಟಕ ಅನುಷ್ಠಾನಕ್ಕಾಗಿ ಗುರಿ ನಿಗದಿಯಾಗಿದೆ.

ಎಂಟು ಜಿಲ್ಲೆಗಳ ವಿಶೇಷ ಘಟಕ ಯೋಜನೆಯಡಿ ರಾಜ್ಯ ವಲಯದಲ್ಲಿ ಒಟ್ಟು 592ಫಲಾನುಭವಿಗಳಿಗೆ 3,552 ಲಕ್ಷರೂ.ಗಳಿಗೆ ಹಾಗೂ ಗಿರಿಜನ ಉಪಯೋಜನೆಯಡಿ 225 ಫಲಾನುಭವಿಗಳಿಗೆ 1350ಲಕ್ಷರೂ. ಗಳ ಅನುದಾನ ಬಿಡುಗಡೆಯಾಗಿದೆ. ವಿಭಾಗದ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮದಡಿಯಲ್ಲಿ 3,84,231 ಫಲಾನುಭವಿಗಳಿಗೆ ಆಗಸ್ಟ್ ಅಂತ್ಯದವರೆಗೆ ಒಟ್ಟು 11308.36 ಲಕ್ಷರೂ.ಗಳ ಪ್ರೋತ್ಸಾಹ ಧನ ನೀಡಲಾಗಿದೆ ಎಂದರು.

ಆರ್.ಐ.ಡಿ.ಎಫ್ ಯೋಜನೆಯಡಿ 283 ಇಲಾಖಾ ಸಂಸ್ಥೆಗಳಿಗೆ ಹೊಸ ಕಟ್ಟಡಗಳ ಕಾಮಗಾರಿಗೆ ಮಂಜೂರಾತಿ ನೀಡಲಾಗಿದ್ದು, 145 ಸಂಸ್ಥೆಗಳ ಕಾಮಗಾರಿ ಪ್ರಗತಿಯಲ್ಲಿದೆ. ವಿಭಾಗದ 3,84,231 ಫಲಾನುಭವಿಗಳಿಗೆ ಅಗಸ್ಟ್ ಅಂತ್ಯದವರೆಗೆ ಒಟ್ಟು 1130.36ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡಲಾಗಿದೆ. 2016-17ನೇ ಸಾಲಿನಲ್ಲಿ ಒಟ್ಟು 11,055ಗಿರಿರಾಜ ಕೋಳಿ ಮರಿಗಳನ್ನು ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.

ಕೋಳಿಶೀತ ಜ್ವರದ ಸಂಬಂಧ ಕಣ್ಗಾವಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಮೈಸೂರು ಮೃಗಾಲಯ, ಕುಕ್ಕರಳ್ಳಿಕೆರೆ, ರಂಗನತಿಟ್ಟು, ಕಾರಂಜಿಕೆರೆಗಳಲ್ಲಿ ವಲಸೆ ಹಕ್ಕಿಗಳ ಅಸಹಜ ಸಾವಿನ ಬಗ್ಗೆ ನಿಗಾವಹಿಸಲಾಗಿದೆ. ಯಾವುದೇ ಕೋಳಿ ಜ್ವರ ರೋಗೋದ್ರೇಕ ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲಾಧಿಕಾರಿಗಳಿಗೆ ರಾಜ್ಯಕ್ಕೆ ಹೊರರಾಜ್ಯದಿಂದ ಬಾತುಕೋಳಿಗಳ ವಲಸೆಯನ್ನು ತಡೆಯಲು ಸೂಚಿಸಲಾಗಿದೆ. ವಿಭಾಗದಲ್ಲಿ ಜಾನುವಾರುಗಳಿಗೆ ಅಥವಾ ಇಲಾಖೆಯ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಬ್ರುಸಿಲೋಸ್ ಕಾಯಿಲೆ ಹರಡಿರುವ ಕುರಿತು ವರದಿಯಾಗಿಲ್ಲ ಎಂದರು.

 

Leave a Reply

comments

Related Articles

error: