ಪ್ರಮುಖ ಸುದ್ದಿಮೈಸೂರು

ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಹೆಜ್ಜೇನು ದಾಳಿ: ದಿಕ್ಕಾಪಾಲಾದ ಜನ

ಬೆಂಗಳೂರಿನ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಸೋಮವಾರ ಸಾಹಸ ಕಲಾವಿದರಿಬ್ಬರು ಕರೆಯಲ್ಲಿ ಮುಳುಗಿದ್ದು, ಅವರುಗಳ ದೇಹ ಶೋಧನೆ ವೇಳೆಯಲ್ಲಿ ಹೆಜ್ಜೇನು ದಾಳಿ ನಡೆಸಿದ್ದು ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ದಾಳಿಯಿಂದ ಯಾರಿಗೂ ಗಾಯವಾದ ಬಗ್ಗೆ ವರದಿಗಳಾಗಿಲ್ಲ.

‘ಮಾಸ್ತಿಗುಡಿ’ ಚಿತ್ರದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಹೆಲಿಕಾಪ್ಟರ್ ನಿಂದ ಸೋಮವಾರ ಮಧ್ಯಾಹ್ನ ಹಾರಿದ್ದ ಸಾಹಸ ಕಲಾವಿದರಾದ ಉದಯ್ ಮತ್ತು ಅನಿಲ್ ನೀರಿನಲ್ಲಿ ಮುಳುಗಿದ್ದು ಅವರ ದೇಹಗಳಿಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು, ನಿರ್ವಹಣಾ ತಂಡ, ಅಗ್ನಿಶಾಮಕ ಮತ್ತು ತುರ್ತುಸೇವೆ ಸಿಬ್ಬಂದಿ, ಪೊಲೀಸರು ಸೋಮವಾರ ತಡರಾತ್ರಿವರೆಗೂ ಶೋಧ ಕಾರ್ಯಾಚರಣೆ ನಡೆಸಿದ್ದು ದೇಹಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಇಂದಿಗೂ ಕಾರ್ಯಾಚರಣೆ ಮುಂದುವರೆದಿದೆ.

ತಿಪ್ಪಗೊಂಡನಹಳ್ಳಿ ಕರೆಯ ದಡದಲ್ಲಿ ಭಾರೀ ಜನಸ್ತೋಮ ಸೇರಿದ್ದು ಈ ವೇಳೆ ಕಿಡಿಗೇಡಿಗಳು ಜೇನುಗೂಡಿಗೆ ಕಲ್ಲು ಹೊಡೆದಿದ್ದರ ಪರಿಣಾಮ ಹೆಜ್ಜೇನು ದಾಳಿ ನಡೆಸಿದ್ದು ದಾಳಿಗೆ ಹೆದರಿ ಜನರು ದಿಕ್ಕಾಪಾಲಾಗಿ ಓಡಿದ್ದಾರೆ.ಈ ಘಟನೆಯಿಂದ ಕ್ಷಣಕಾಲ ಆತಂಕ ಸೃಷ್ಟಿಯಾಗಿತ್ತು.

Leave a Reply

comments

Related Articles

error: