ಸುದ್ದಿ ಸಂಕ್ಷಿಪ್ತ

ಅನಧಿಕೃತ ಕುಡಿಯುವ ನೀರಿನ ಘಟಕಗಳ ಮೇಲೆ ಕ್ರಮಕ್ಕೆ ಆಗ್ರಹ

ಮೈಸೂರು,ಅ.26 : ಜಿಲ್ಲೆಯಲ್ಲಿ ಅನಧಿಕೃತ ಕುಡಿಯುವ ನೀರಿನ ಘಟಕದ ಮೇಲೆ ಕ್ರಮ ಕೈಗೊಳ್ಳಲು ಮಾನವ ಹಕ್ಕುಗಳ ಸೇವಾ ಸಮಿತಿಯು ಒತ್ತಾಯಿಸಿದೆ.

ಸಮಿತಿ ಅಧ್ಯಕ್ಷ ಕಸ್ತೂರಿ ಚಂದ್ರು ನಗರದಲ್ಲಿ ಐ.ಎಸ್.ಐ ಮತ್ತು ಆಹಾರ ಸಂರಕ್ಷಣಾ ಪರವಾನಿಗೆ ಪಡೆಯದೆ ಉದ್ದಿಮೆ ನಡೆಸುತ್ತಿದ್ದು, ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದನ್ನು ಮನಗಂಡು ಅಸಂರಕ್ಷಿತ ಕಳಪೆ ಕ್ಯಾನಿನಲ್ಲಿ, ಗುಣಮಟ್ಟ ಪರೀಕ್ಷಿಸದೇ ಅಶುದ್ಧ ನೀರು ನೀಡುವ ಮೂಲಕ ಉದ್ಯಮಿಗಳು ಮತ್ತು ವಿತಕರು ಅಮಾಯಕರನ್ನು ವಂಚಿಸುತ್ತಿದ್ದಾರೆಂದು ದೂರಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿ ಮತ್ತು ಆಹಾರ ಸಂರಕ್ಷಣಾಧಿಕಾರಿಗಳು ಅನಧಿಕೃತ ಕುಡಿಯುವ ನೀರಿನ ಕೇಂದ್ರಗಳನ್ನು ಮಟ್ಟಹಾಕಬೇಕೆಂದು ಒತ್ತಾಯಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: