ಸುದ್ದಿ ಸಂಕ್ಷಿಪ್ತ

8ನೇ ಏಷಿಯನ್ ಔಷಧ ವಿಜ್ಞಾನ ಶಾಲೆಗಳ ಸಂಘದ ಸಮಾವೇಶ ಅ.27 ರಿಂದ

ಮೈಸೂರು, ಅ.26 : ಶ್ರೀಶಿವರಾತ್ರೀಶ್ವರ ವಿವಿ ಮತ್ತು ಭಾರತೀಯ ಔಷಧ ಮಹಾ ವಿದ್ಯಾಲಯಗಳ ಸಂಘವು ಇದೇ ಅ.27 ರಿಂದ 29ರವರೆಗೆ ಮೂರು ದಿನಗಳ ಕಾಲ 8ನೇ ಏಷಿಯನ್ ಔಷಧ ವಿಜ್ಞಾನ ಶಾಲೆಗಳ ಸಂಘದ ಸಮಾವೇಶವನ್ನು ಜೆ.ಎಸ್. ಎಸ್ ವಿದ್ಯಾನಿಲಯದಲ್ಲಿ ಆಯೋಜಿಸಿದೆ.

ಅ.27ರ ಬೆಳಗ್ಗೆ 10ಕ್ಕೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ ನಿರ್ದೇಶಕ ಡಾ.ಧೀರೇಂದ್ರ ಪಾಲ್ ಸಿಂಗ್ ಉದ್ಘಾಟಿಸುವರು, ಜೆ.ಎಸ್.ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಡಾ.ಸಿ.ಜಿ.ಬೆಟ್ ಸೂರ್ ಮಠ್, ಜೆ.ಎಸ್.ಎಸ್ ಕುಲಪತಿ ಡಾ.ಬಿ.ಸುರೇಶ್ ಮೊದಲಾದವರು ಭಾಗಿಯಾಗುವರು.

ಮೂರು ದಿನಗಳ ಕಾಲ ನಡೆಯುವ ಸಮಾವೇಶದಲ್ಲಿ ಸಾವಿರಕ್ಕೂ ಅಧಿಕ ಔಷಧ ವಿಜ್ಞಾನ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಸಂಶೋಧಕರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: