ಮೈಸೂರು

ನೀರಿಲ್ಲದೇ ರೋಗಿಗಳ ಪರದಾಟ : ರೋಗ ಉತ್ಪತ್ತಿ ತಾಣವಾಗುತ್ತಿರುವ ಆಸ್ಪತ್ರೆ

ಮೈಸೂರು,ಅ.27:- ಆಸ್ಪತ್ರೆಗೆ ಜನರು ಏನಕ್ಕೆ ಹೋಗ್ತಾರೆ, ಕಾಯಿಗೆ ಗುಣಪಡಿಸಿಕೊಳ್ಳೋದಿಕ್ಕೆ ತಾನೇ, ಆದರೆ ಆಸ್ಪತ್ರೆಯೇ ರೋಗಗಳ ಉತ್ಪತ್ತಿ ತಾಣವಾದರೆ ಜನರು ಹೋಗುವುದಾದರೂ ಎಲ್ಲಿಗೆ..? ಇಂತಹುದೇ ಸಂಕಷ್ಟವನ್ನು ಕೆ.ಆರ್. ಆಸ್ಪತ್ರೆಯ ಆಸ್ಪತ್ರೆಯ ಜಯದೇವ ಹೃದ್ರೋಗ ವಿಭಾಗದವರು ಅನುಭವಿಸುತ್ತಿದ್ದಾರೆ.

ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು,ರೋಗಿಗಳು ಪರದಾಡುವಂತಾಗಿದೆ. ಆಸ್ಪತ್ರೆಯ ಜಯದೇವ ಹೃದ್ರೋಗ ವಿಭಾಗದ ಕಟ್ಟಡದಲ್ಲಿ ನೀರಿಲ್ಲದೇ  ರೋಗಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಹತ್ತು ದಿನಗಳಿಂದ ನೀರಿಲ್ಲದೆ ಶೌಚಾಲಯ ಗಬ್ಬು ನಾರುತ್ತಿದ್ದು, ಆಸ್ಪತ್ರೆಯೇ ರೋಗಗಳ ತವರಾಗಿ ಮಾರ್ಪಟ್ಟಿದೆ. ಕಾಯಿಲೆ ಗುಣಪಡಿಸಿಕೊಳ್ಳಲು ಬಂದವರು ಇಲ್ಲಿನ ಅವ್ಯವಸ್ಥೆ ನೋಡಿ  ಭಯಗ್ರಸ್ತರಾಗಿದ್ದಾರೆ. ಜಯದೇವ ಆಸ್ಪತ್ರೆಯ ಎರಡನೇ ಅಂತಸ್ತಿನಲ್ಲಿ ರೋಗಿಗಳ ಪಾಡು ಕೇಳುವವರೇ ಇಲ್ಲದಂತಾಗಿದೆ. ಇತ್ತ ಗಮನ ಹರಿಸುವವರಾದರೂ ಯಾರು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಂಡರೆ ಒಳ್ಳೆಯದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: