ಮೈಸೂರು

ನ.23-24 : ಮಾರಾಟಗಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆ

ಮೈಸೂರು,ಅ.27:- ಜಿಲ್ಲಾ ಕೈಗಾರಿಕಾ ಕೇಂದ್ರ, ಕಾಸಿಯಾ, ಬೆಂಗಳೂರು ಹಾಗೂ ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಸಂಯುಕ್ತ ಆಶ್ರಯದಲ್ಲಿ ಮಾರಾಟಗಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆ 2017 ಬೆಂಗಳೂರು ಇಂಟರ್ ನ್ಯಾಸನಲ್ ಎಕ್ಸಿಬಿಷನ್ ಸೆಂಟರ್ ನಲ್ಲಿ ನ.23-24ರಂದು ನಡೆಯಲಿದೆ.

ಮೈಸೂರಿನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮೈಸೂರು ಕೈಗಾರಿಕಾ ಸಂಘದ ಕಾರ್ಯದರ್ಶಿ ಸುರೇಶ್‌ ಕುಮಾರ್‌ ಜೈನ್‌ ಮಾತನಾಡಿ ವಿವಿಧ ಮಳಿಗೆಗಳು ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಮೈಕ್ರೋ ಸ್ಮಾಲ್ ಅಂಡ್ ಮೀಡಿಯಮ್ ಎಂಟರ್ ಪ್ರೈಸಸ್ ಗೆ ಅವಕಾಶಗಳನ್ನು ಒದಗಿಸಿಕೊಡಬೇಕು. ಎಂಎಸ್ ಎಂಇ ಕ್ಷೇತ್ರಗಳಲ್ಲಿ ಸೂಕ್ತವಾದ ಮಾರಾಟಗಾರರನ್ನು ಗುರುತಿಸಲು ಒಎಇಂಗಳನ್ನು ಉತ್ತೇಜಿಸಬೇಕು. ರಾಜ್ಯದಲ್ಲಿ ಹೂಡಿಕೆ ಅವಕಾಶಗಳನ್ನು ಸೃಷ್ಟಿಸಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವುದು, ಖರೀದಿದಾರರ ಮಾರಾಟಗಾರರ ಭೇಟಿ, ಬಿ2ಬಿ,ಬಿ2ಎಸ್ ಮತ್ತು ಬಿ2ಜಿ ಸಭೆಗಳನ್ನು ಏರ್ಪಡಿಸಿ ಎಂ.ಎಸ್.ಎಂ.ಇ ಉತ್ಪನ್ನಗಳ ಮಾರಾಟಕ್ಕೆ ಅನುವು ಮಾಡಿಕೊಡುವುದೇ ಶೃಂಗಸಭೆಯ ಉದ್ದೇಶಗಳಾಗಿವೆ ಎಂದು ತಿಳಿಸಿದರು. ಒಟ್ಟು ಎರಡು ಲಕ್ಷ ಚದರ ಅಡಿಗಳ ಎರಡು ಸಭಾಂಗಣದಲ್ಲಿ ಮೂಲ ಸಲಕರಣೆ ತಯಾರಿಕೆ ಮತ್ತು ಎಂ ಎಸ್ ಎಂ ಇ ಉತ್ಪನ್ನಗಳ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕ ವಲಯ ಘಟಕಗಳು,ಅಂತರಿಕ್ಷಯಾನ, ರಕ್ಷಣಾ ಮತ್ತು ಬಾಹ್ಯಾಕಾಶ ಸಂಸ್ಥೆಗಳು, ಆಟೋಮೊಬೈಲ್ ಘಟಕಗಳು, ಬಯೋಟೆಕ್ ಫಾರ್ಮಾ ಮತ್ತು ವೈದ್ಯಕೀಯ ಸಾಧನಗಳು, ಇಂಜಿನಿಯರಿಂಗ್ ಪ್ರಿಷಿಷನ್ ಮತ್ತು ಮೆಷನರಿ ಉತ್ಪನ್ನಗಳು, ಅಗ್ರಿ ಮತ್ತು ಆಹಾರ ಸಂಸ್ಕರಣ, ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ಸ್ ಪ್ರದರ್ಶನದ ಕೇಂದ್ರ ಬಿಂದುಗಳಾಗಿವೆ. ನೀತಿ ಮಧ್ಯಸ್ಥಿಕೆಗಳನ್ನು ಒಳಗೊಳ್ಳುವ ಆರು ವಲಯ ನಿರ್ದಿಷ್ಟ ಅವಧಿಗಳು, ಪರಿಸರ ವ್ಯವಸ್ಥೆಯನ್ನು ಹೆಚ್ಚಿಸುವ ತಂತ್ರಗಳು, ಕೈಗಾರಿಕಾ ಕ್ಷೇತ್ರದ ಭವಿಷ್ಯದ ಬೆಳವಣಿಗೆಗಾಗಿ ರೋಡ್ ಮ್ಯಾಪ್ ಅಂತರಿಕ್ಷ ಮತ್ತು ರಕ್ಷಣಾ ಉಪಕರಣ, ಬಯೋಟೆಕ್, ಔಷಧ ಮತ್ತು ವೈದ್ಯಕೀಯ ಸಾಧನಗಳು, ಕೃಷಿ ಮತ್ತು ಆಹಾರ ಸಂಸ್ಕರಣ, ಆಟೋಮೊಬೈಲ್, ಇಂಜಿನಿಯರಿಂಗ್, ಕೈಮಗ್ಗ ಮತ್ತು ಜವಳಿ, ಎಂ.ಎಸ್.ಎಂ.ಇ ಹಣಕಾಸು ನಾವಿನ್ಯತೆ, ಸ್ಪರ್ಧಾತ್ಮಕತೆ, ಪರಿಸರ ವ್ಯವಸ್ಥೆ, ಸಾರ್ವಜನಿಕ ಸಂಗ್ರಹಣೆ ನೀತಿ ಗುಣಮಟ್ಟದ ಮಾನದಂಡಗಳು, ಪ್ರಮಾಣೀಕರಣಗಳು, ಜಿಎಸ್ ಟಿ ಇತ್ಯಾದಿಗಳನ್ನು ಎಂಎಸ್ ಎಂಇಗಳನ್ನು ಸಂವೇದನೆ ಮಾಡುವುದು, ಒಇಎಂಗಳು ಮತ್ತು ಎಂಎಸ್ ಇಎ ಗಳ ನಡುವೆ ಬಿ2ಬಿ ಸಭೆಗಳು, ಸಮ್ಮೇಳನದ ಸಮಯದಲ್ಲಿ ಉತ್ತಮ ಉತ್ಪಾದನಾ ಉದ್ದಿಮೆಗಳು ಮತ್ತು ರಫ್ತು ಪ್ರಶಸ್ತಿಗಳಿಗಾಗಿ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಏರೋಸ್ಪೇಸ್ ಮತ್ತು ಡಿಪೆನ್ಸ್ ಸಲಕರಣೆಗಳು, ವಾಹನಗಳು ಆಟೋ ಘಟಕಗಳು ಮತ್ತು ವಿದ್ಯುತ್ ವಾಹನಗಳು, ಜೈವಿಕ ಔಷಧೀಯ ಮತ್ತು ವೈದ್ಯಕೀಯ ಸಾಧನಗಳು, ಕೃಷಿ ಮತ್ತು ಆಹಾರ ಸಂಸ್ಕರಣ ಮತ್ತು ಯಂತ್ರೋಪಕರಣಗಳು, ಕೈಮಗ್ಗ ಮತ್ತು ಜವಳಿ ನವೀನತೆ ಮತ್ತು ಪಾರಂಪರಿಕ ಉದ್ಯಮಗಳು ಪ್ರಮುಖ ವಲಯಗಳಾಗಿವೆ.

ಸುದ್ದಿಗೋಷ್ಠಿಯಲ್ಲಿ ರಾಮಕೃಷ್ಣ ಗೌಡ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: