ಸುದ್ದಿ ಸಂಕ್ಷಿಪ್ತ

ತಾಳಮದ್ದಳೆ ಕಾರ್ಯಕ್ರಮಗಳು  

ಕರಾವಳಿ ಯಕ್ಷಗಾನ ಕೇಂದ್ರದ ವತಿಯಿಂದ ನ.13 ರಿಂದ 18 ರವರೆಗೆ ಕರಾವಳಿ ಯಕ್ಷಗಾನ ಕೇಂದ್ರದ ತಾಳಮದ್ದಳೆ ಕಾರ್ಯಕ್ರಮಗಳು ನಗರದ ವಿವಿಧೆಡೆಯಲ್ಲಿ ನಡೆಯಲಿವೆ.

ನ.13 ರ ಸಂಜೆ 5.30 ಕ್ಕೆ ಸರಸ್ವತಿಪುರಂನ ಶ್ರೀಕೃಷ್ಣ ಧಾಮದಲ್ಲಿ ಪಾದುಕಾ ಪ್ರಧಾನ, 14 ರಂದು ಸಂಜೆ 6 ಗಂಟೆಗೆ ಸರಸ್ವತಿಪುರಂನ ವಿಜಯವಿಠಲ ಶಾಲೆಯಲ್ಲಿ ಊರ್ವಶಿ ತಾಪ, 15 ರಂದು ಸಂಜೆ 6 ಗಂಟೆಗೆ ರೂಪಾನಗರದ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮಾಗದ ವಧೆ, 16 ರಂದು ಸಂಜೆ 6 ಗಂಟೆಗೆ ಬೋಗಾದಿ ರಸ್ತೆಯ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಹತ್ತಿರದ ಧ್ವನ್ಯಾ ಲೋಕದಲ್ಲಿ ತ್ರಿಶಂಕು ಸ್ವರ್ಗ, 17 ರಂದು ಸಂಜೆ 6 ಗಂಟೆಗೆ ಶ್ರೀರಾಂಪುರದ ಬಿ.ಇ.ಎಂ.ಎಲ್. ಬಡಾವಣೆಯ ಶ್ರೀ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಪಾರ್ಥಸಾರಥ್ಯ ಹಾಗೂ 18 ರಂದು ಸಂಜೆ 5.30 ಕ್ಕೆ ಕುವೆಂಪುನಗರದ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ಭೀಷ್ಮ ಪ್ರತಿಜ್ಞೆ ಎಂಬ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮಗಳು ನಡೆಯಲಿವೆ.

ಹೆಚ್ಚಿನ ಮಾಹಿತಿಗಾಗಿ 9448054342/ 9611075040 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: