ಸುದ್ದಿ ಸಂಕ್ಷಿಪ್ತ

ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸಾಹು ಮಹಾರಾಜ್ ಜಯಂತಿ ಅ.29.

ಮೈಸೂರು,ಅ.27 : ಕರ್ನಾಟಕ ದಲಿತ ವೇದಿಕೆ ಜಿಲ್ಲಾ ಘಟಕವು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸಾಹು ಮಹಾರಾಜ್ ಜಯಂತಿಯನ್ನು ಅ.28ರ ಬೆಳಗ್ಗೆ 11.30ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ಆಯೋಜಿಸಿದೆ.

ದಕ್ಷಿಣ ಕನ್ನಡ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಎಂ.ಆರ್.ರವಿಕುಮಾರ್ ಉದ್ಘಾಟಿಸುವರು, ಜಿಲ್ಲಾಧ್ಯಕ್ಷ ಹಿನಕಲ್ ಸೋಮು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯಾಧ್ಯಕ್ಷ ಡಿ.ಎಸ್.ಸಿದ್ದಲಿಂಗಮೂರ್ತಿ, ನಾಗನಹಳ್ಳಿ ಎಂ.ರೇವಣ್ಣ, ಕೆ.ಶಂಕರ್ ಮೊದಲಾದವರು ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: