ಕರ್ನಾಟಕಪ್ರಮುಖ ಸುದ್ದಿ

ಹೆಚ್.ಡಿ ಕುಮಾರಸ್ವಾಮಿ ಅವರ ನಿವಾಸಕ್ಕೆ ಇಂಧನ ಸಚಿವ ಡಿ.ಕೆ ಶಿ ದಿಢೀರ್ ಭೇಟಿ

ರಾಜ್ಯ(ಬೆಂಗಳೂರು)ಅ.28:- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ನಿವಾಸಕ್ಕೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ದಿಢೀರ್ ಭೇಟಿ ನೀಡಿದರು.

ಬಿಜೆಪಿ ಅವಧಿಯಲ್ಲಿ  ಇಂಧನ ಇಲಾಖೆಯಲ್ಲಿ ಅವ್ಯವಹಾರ ಕುರಿತು ಅಕ್ಟೋಬರ್ 30ರಂದು ಸರ್ಕಾರಕ್ಕೆ ಸದನ ಸಮಿತಿ ವರದಿ ಸಲ್ಲಿಕೆ ಹಿನ್ನೆಲೆಯಲ್ಲಿ  ಜೆ.ಪಿನಗರದ ನಿವಾಸದಲ್ಲಿ ಖುದ್ದು ಹೆಚ್.ಡಿ ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಸದನ ಸಮಿತಿಯ ಸದಸ್ಯರಾಗಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲು ಸದನ ಸಮಿತಿ ಸದಸ್ಯರ ಸಹಿ ಅಗತ್ಯವಿರುವ  ಹಿನ್ನೆಲೆಯಲ್ಲಿ ಡಿಕೆಶಿ  ಹೆಚ್.ಡಿ ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: