ಕ್ರೀಡೆಪ್ರಮುಖ ಸುದ್ದಿ

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಸೆಮಿಫೈನಲ್ ಗೆ ಲಗ್ಗೆ ಇಟ್ಟ ಪಿ.ವಿ.ಸಿಂಧು, ಎಚ್.ಎಸ್.ಪ್ರಣಯ್, ಕೀಡಂಬಿ ಶ್ರೀಕಾಂತ್

ಪ್ಯಾರಿಸ್,ಅ.28-ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಪಿ.ವಿ.ಸಿಂಧು, ಎಚ್.ಎಸ್.ಪ್ರಣಯ್, ಕೀಡಂಬಿ ಶ್ರೀಕಾಂತ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದ ಪಿ.ವಿ.ಸಿಂಧು 21-14, 21-14 ಅಂತರದಿಂದ ಚೀನಾದ ಚೆನ್ ಯುಫಿ ಅವರನ್ನು ಸೋಲಿಸಿದ್ದರು.

ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ ದಕ್ಷಿಣ ಕೊರಿಯಾದ ಹೈಯೊಕ್ ಜಿನ್ ಜೀನ್ ಅವರನ್ನು 21-16, 21-16 ಅಂತರದಿಂದ ಮಣಿಸಿ ಪ್ರಣಯ್ ಸೆಮಿಫೈನಲ್ ತಲುಪಿದರು. ಮತ್ತೊಂದು ಪಂದ್ಯದಲ್ಲಿ ಡೆನ್ಮಾರ್ಕ್ ಓಪನ್ ಚಾಂಪಿಯನ್ ಪ್ರಶಸ್ತಿ ಗೆದ್ದ ಕಿಡಂಬಿ ಶ್ರೀಕಾಂತ್ ಚೀನಾದ ಶಿ ಯೂಕಿ ವಿರುದ್ಧ ಮೊದಲ ಸೆಟ್ ಸೋತರೂ ಬಳಿಕ 8-21, 21-19, 21-19 ಅಂತರದಲ್ಲಿ ಪಂದ್ಯ ಗೆದ್ದರು.

ಶನಿವಾರ ಸಂಜೆ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಇಬ್ಬರು ಭಾರತೀಯ ಆಟಗಾರರಾದ ಶ್ರೀಕಾಂತ್ ಮತ್ತು ಪ್ರಣಯ್ ಪರಸ್ಪರ ಎದುರಾಗುವರು. (ವರದಿ-ಎಂ.ಎನ್)

Leave a Reply

comments

Related Articles

error: