ಕ್ರೀಡೆದೇಶ

3 ಏಕದಿನ ಪಂದ್ಯಗಳ ಸರಣಿ ಅಂತಿಮ ಪಂದ್ಯ: ಆಟಗಾರರಿಗೆ ಅದ್ಧೂರಿ ಸ್ವಾಗತ

ಕಾನ್ಪುರ,ಅ.28: ಭಾರತ ಹಾಗೂ ನ್ಯೂಜಿಲೆಂಡ್ ತಂಡದ ನಾಳೆ ನಡೆಯಲಿರುವ 3 ಏಕದಿನ ಪಂದ್ಯಗಳ ಸರಣಿಯ ಅಂತಿಮ ಪಂದ್ಯವನ್ನಾಡಲು ಕಾನ್ಪುರಕ್ಕೆ ಆಗಮಿಸಿದ ಆಟಗಾರರಿಗೆ ಕೇಸರಿ ಸ್ವಾಗತ ದೊರೆಯಿತು.

ಆಟಗಾರರು ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಆರತಿ ಬೆಳಗಿ, ಹೂವಿನ ಹಾರ ಹಾಕಿ ಸ್ವಾಗತ ಕೋರಲಾಗುವುದು. ಆದರೆ, ಆಟಗಾರರು ತಂಗಿರುವ ಹೋಟೆಲ್ ಸಿಬ್ಬಂದಿ, ಆಟಗಾರರಿಗೆ ಹಾರಕ್ಕೆ ಬದಲು ಕೇಸರಿ ಶಾಲು ಹೊದಿಸಿ ಸ್ವಾಗತ ಕೋರಿದ್ದಾರೆ.ಪ್ರತಿಕ್ರಿಯಿಸಿರುವ ಹೋಟೆಲ್’ನ ವ್ಯವಸ್ಥಾಪಕ ನಿರ್ದೇಶಕ ವಿಕಾಸ್, ‘ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆಯಲ್ಲಿ ದೀಪಾವಳಿ ಆಚರಣೆಯಿಂದ ಪ್ರೇರಣೆಗೊಂಡು ಆಟಗಾರರಿಗೆ ಭಾರತೀಯ ಸಂಸ್ಕೃತಿಯ ಅನುಭವ ನೀಡುವ ಸಲುವಾಗಿ ಈ ರೀತಿಯ ಸ್ವಾಗತ ನೀಡಲಾಯಿತು’ ಎಂದಿದ್ದಾರೆ.  ( ವರದಿ : ಪಿ. ಎಸ್ )

Leave a Reply

comments

Related Articles

error: