ಪ್ರಮುಖ ಸುದ್ದಿಮೈಸೂರು

ಕೆಜೆಪಿಯಲ್ಲಿದ್ದಾಗ ಟಿಪ್ಪು ಬೇಕಿತ್ತು, ಈಗ ಬೇಡವೇ?: ಸಿಎಂ

ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ ನಡೆಸುವುದು ಬಿಜೆಪಿ, ಆರ್‍ಎಸ್‍ಎಸ್‍ನವರಿಗೆ ಬಿಟ್ಟ ವಿಚಾರವಾಗಿದೆ. ಸಮಾಜದ ಸಾಮರಸ್ಯ ಮತ್ತು ಕಾನೂನು ಸುವ್ಯವಸ್ಥೆ ಹಾಳು ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಳೆದ ವರ್ಷ ಟಿಪ್ಪು ಜಯಂತಿ ಸಂದರ್ಭ ಸಮಸ್ಯೆ ಉದ್ಭವಿಸಲು ಆರ್‍ಎಸ್‍ಎಸ್‍ ಕಾರಣ. ಸಂಸದ ಪ್ರತಾಪ ಸಿಂಹ ಮತ್ತೊಮ್ಮೆ ಇತಿಹಾಸ ಓದಬೇಕಿದೆ. ಅವರು ಓದಿರುವ ಇತಿಹಾಸ ಬ್ರಿಟಿಷರು ಬರೆದದ್ದು. ಟಿಪ್ಪುವನ್ನು ವಿರೋಧಿಸಿದರೆ ರಾಜಕೀಯ ಲಾಭ ಸಿಗುತ್ತದೆ ಎನ್ನುವ ಭ್ರಮೆಯಲ್ಲಿ ಬಿಜೆಪಿಯವರು ಇದ್ದಾರೆ. ಕೆಜೆಪಿ ಕಟ್ಟಿದಾಗ ಬಿ.ಎಸ್‍. ಯಡಿಯೂರಪ್ಪ ಅವರಿಗೆ ಟಿಪ್ಪು ಸುಲ್ತಾನ ಬೇಕಿದ್ದ. ಈಗ ಮತ್ತೆ ಬಿಜೆಪಿಗೆ ಬಂದಿರುವ ಕಾರಣಕ್ಕೆ ಟಿಪ್ಪು ಬೇಡವೇ?

ಯಡಿಯೂರಪ್ಪ ಅವರು ಶ್ರೀರಂಗಪಟ್ಟಣಕ್ಕೆ ಹೋಗಿ ಟಿಪ್ಪು ಸಮಾಧಿಗೆ ನಮಸ್ಕಾರ ಮಾಡಿ ಬಂದಿದ್ದರು. ಕಾರ್ಯಕ್ರಮದಲ್ಲಿ ಟಿಪ್ಪು ಡ್ರೆಸ್ ಹಾಕಿಕೊಂಡು ಖಡ್ಗ ಹಿಡಿದು ನಿಂತಿದ್ದರು. ಆಗ ಮುಸಲ್ಮಾನರ ಮತ ಪಡೆಯಲು ಹೋದವರಿಗೆ ಈಗ ಮುಸ್ಲಿಮರ ಮತ ಬೇಡವೇ? ಎಂದು ಟೀಕಿಸಿದರು.

ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರ ಬಗ್ಗೆ ಯಾವುದೇ ಪ್ರಶ್ನೆ ಕೇಳಬೇಡಿ. ನೋ ಕಮೆಂಟ್ಸ್. ಅವರಿಗೆ ಜನರೇ ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

Leave a Reply

comments

Related Articles

error: