ಮೈಸೂರು

ನ.6ರಿಂದ ಭರಣಿ ಫೌಂಡೇಷನ್ ನಿಂದ ಜಿ.ಎಸ್.ಟಿ ಉಚಿತ ವೃತ್ತಿ ತರಬೇತಿ

ಮೈಸೂರು,ಅ.28 : ನಗರದ ಭರಣಿ ಫೌಂಡೇಶನ್ ವತಿಯಿಂದ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿಯಲ್ಲಿ ಯುವಕ, ಯುವತಿಯಿರಿಗೆ ಉಚಿತ ವೃತ್ತಿಪರ ಕೌಶಲ್ಯ ಹಾಗೂ ಸರಕು ಮತ್ತು ಸೇವಾ ತೆರಿಗೆ ನಿರ್ವಹಣೆ ತರಬೇತಿಗಳನ್ನು ಆಯೋಜಿಸಿದೆ ಎಂದು ಸಂಸ್ಥೆಯ ಸಲಹೆಗಾರ ಡಾ.ಹೊನ್ನಯ್ಯ ತಿಳಿಸಿದರು.

ಸಿದ್ಧಾರ್ಥ ನಗರದ ಸಂಗೀತ ಕಾರ್ನರ್ ಬಳಿಯಿರುವ #834, 2ನೇ ಮಹಡಿಯಲ್ಲಿರುವ ಕಚೇರಿಯಲ್ಲಿ ತರಬೇತಿಗಳನ್ನು ನೀಡಲಾಗುತ್ತಿದ್ದು,  ಈಗಾಗಲೇ ಎರಡು ತಂಡಗಳು ತರಬೇತಿ ಪಡೆದಿದ್ದು,ನ.6ರಿಂದ ಮುಂದಿನ ಬ್ಯಾಚ್ ಆರಂಭವಾಗಲಿದ್ದು ವಿದ್ಯಾವಂತ ಯುವ ಜನತೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಬೆಳಗ್ಗೆ ಮತ್ತು ಸಂಜೆ ಬ್ಯಾಚ್ ನಂತೆ ತರಗತಿಗಳು ನಡೆಯಲಿದ್ದು, ಪ್ರತಿ ಬ್ಯಾಚ್ ನಲ್ಲಿ 30 ಜನರಿಗೆ ಅವಕಾಶವಿದೆ, ಟೈಲರಿಂಗ್, ಕಂಪ್ಯೂಟರ್ ಡಾಟಾ ಎಂಟ್ರಿ ಅಪರೇಟಿವ್, ರಿಟೇಲ್ ಸೇಲ್ಸ್ ಅಸೋಸಿಯೇಟ್ಸ್ ವಿಷಯದಲ್ಲಿ 3 ತಿಂಗಳ ಕಾಲ ತರಬೇತಿ ನೀಡಲಾಗುವುದು. 10ನೇ ತರಗತಿ ವಿದ್ಯಾಭ್ಯಾಸ ಪಡೆದ, 18 ವರ್ಷ ಮೇಲ್ಪಟ್ಟ ನಿರುದ್ಯೋಗಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬಹುದು.

ವಾಣಿಜ್ಯ ವಿಭಾಗದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸರಕು ಮತ್ತು ಸೇವಾ ತೆರಿಗೆಗಳ (ಜಿ.ಎಸ್.ಟಿ) ನೋಂದಣಿ ಪ್ರಕ್ರಿಯೆ ಸಂಬಂಧಿಸಿದ ತೆರಿಗೆಗಳನ್ನು ಲೆಕ್ಕಾಚಾರ ಮಾಡುವ ಜ್ಞಾನ ಪುಸ್ತಕಗಳು ಮತ್ತು ದಾಖಲೆಗಳನ್ನು ನಿರ್ವಹಣೆ ಮಾಡುವುದು ಹಾಗೂ ರಿಟರ್ನ್ಸ್  ಫೈಲಿಂಗ್. ಹಣ ಸಂದಾಯ ಸೇರಿದಂತೆ ವಿವಿಧ ವೃತ್ತಿಪರ ಕೌಶಲ್ಯತೆಯನ್ನು ನೀಡಲಾಗುವುದು ಎಂದು ತಿಳಿಸಿದರು. www.bharanifoundation.org ಮೂಲಕ ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ ಮೊ.ನಂ. 9448644014, 9844436869 ಅನ್ನು ಸಂಪರ್ಕಿಸಬಹುದು.

ಗೋಷ್ಠಿಯಲ್ಲಿಯಲ್ಲಿ ಮುಖ್ಯ ನಿರ್ವಾಹಣಾಧಿಕಾರಿ ಕೆ.ಶಶಿಧರ್, ಪೌಂಡೇಷನ್ ಅಧ್ಯಕ್ಷೆ ಜಿ.ಸುನಿತಾ, ಟ್ರಸ್ಟಿ ಜಿ.ಸಿ.ವಿನುತಾ ಹಾಜರಿದ್ದರು (ವರದಿ : ಕೆ.ಎಂ.ಆರ್)

Leave a Reply

comments

Related Articles

error: