ಮೈಸೂರು

ಟಿಪ್ಪು ಜಯಂತಿ ಹಿನ್ನೆಲೆ : ಪೊಲೀಸರಿಂದ ಪಥ ಸಂಚಲನ

police-01-webಟಿಪ್ಪು ಜಯಂತಿ ನವೆಂಬರ್ 10ರಂದು ನಡೆಯಲಿದ್ದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.

ನಗರದ ಸೂಕ್ಷ್ಮಪ್ರದೇಶಗಳಾದ ಉದಯಗಿರಿಯ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು. ಮಹಾತ್ಮಾಗಾಂಧಿ ರಸ್ತೆಯ ಬನುಮಯ್ಯ ಪಾಲಿಟೆಕ್ನಿಕ್ ಕಾಲೇಜು ಬಳಿಯಿಂದ ಹೊರಟ 600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಉದಯಗಿರಿ ವೃತ್ತ, ಮಹದೇವಪುರ ರಸ್ತೆ, ಏಕ್ ಮಿನಾರ್ ರಸ್ತೆಗೆ ಬಂದು ಅಲ್ಲಿಂದ ಸುಲ್ತಾನ್ ರಸ್ತೆ ಹರಿಶ್ಚಂದ್ರ ರಸ್ತೆ, ಕ್ಯಾತಮಾರನಹಳ್ಳಿ ವೃತ್ತ, ಹಲೀಮ ಸಾದಿಯಾ ಟ್ರಸ್ಟ್ ರಸ್ತೆ, ಭವಿಷ್ಯನಿಧಿ ಕಚೇರಿಯ ಬಳಿ ಸಾಗಿ ಬಂದರು.

ಅಲ್ಲಿಂದ ಮತ್ತೆ ಮಹದೇವಪುರ ರಸ್ತೆ ಮೂಲಕ ಮತ್ತೆ ಉದಯಗಿರಿ ವೃತ್ತಕ್ಕೆ ಬಂದು ಎಡ ತಿರುವು ಪಡೆದು ಮಹಾತ್ಮಾಗಾಂಧಿ ರಸ್ತೆ, ಬಸಪ್ಪಾಜಿ ವೃತ್ತದ ಮೂಲಕ ಬನುಮಯ್ಯ ಕಾಲೇಜು ವೃತ್ತದಲ್ಲಿ ಪಥ ಸಂಚಲನ ನಡೆಸಿದರು. ಪಥಸಂಚಲನದಲ್ಲಿ ಅಶ್ವದಳ, ನಗರ ಸಶಸ್ತ್ರದಳ, ಕೆ.ಎಸ್.ಆರ್.ಪಿ ತುಕಡಿ, ಕಮಾಂಡೋ ಪಡೆ, ಸಿವಿಲ್ ಪೊಲೀಸ್ ಅಧಿಕಾರಿಗಳು, ಗೃಹರಕ್ಷಕ ದಳ, ಬ್ಯಾಂಡ್ ತಂಡ ಸೇರಿದಂತೆ ವಜ್ರ ಫಾಲ್ಕನ್, ಇಂಟರ್ ಸೆಪ್ಟರ್, ಪಿಸಿಅರ್, ಗರುಡ ವಾಹನಗಳೂ ಪಾಲ್ಗೊಂಡಿದ್ದವು.

ಪೊಲೀಸ್ ಬ್ಯಾಂಡ್ ತಂಡ ದೇಶಭಕ್ತಿ ಗೀತೆಯ ಹಾಡಿನ ಮೂಲಕ ಮುಂದೆ ಸಾಗುತ್ತಿದ್ದರೆ ಹಿಂದೆ ಪೊಲೀಸರು ಬಂದೂಕುಧಾರಿಗಳಾಗಿ ಹೆಜ್ಜೆ ಹಾಕುತ್ತಿರುವುದು ಕಂಡು ಬಂತು.

Leave a Reply

comments

Related Articles

error: