ಕರ್ನಾಟಕಪ್ರಮುಖ ಸುದ್ದಿ

ಕೆಪಿಸಿಸಿ ಅಧ್ಯಕ್ಷನಾಗಿ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ್ದೇನೆ: ಪರಮೇಶ್ವರ್

 ಬೆಂಗಳೂರು,ಅ.28-ಕೆಪಿಸಿಸಿ ಅಧ್ಯಕ್ಷನಾಗಿ ಸೋನಿಯಾ ಗಾಂಧಿ ನನಗೆ ಕೊಟ್ಟ ಜವಾಬ್ದಾರಿಯನ್ನು ನಾನು ಸಮರ್ಥವಾಗಿ ನಿಭಾಯಿಸಿದ್ದೇನೆ ಎಲ್ಲರನ್ನೂ ಒಮ್ಮತಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಿದ್ದೇನೆ. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.

ಕೆಪಿಸಿಸಿ ಅಧ್ಯಕ್ಷರಾಗಿ ಏಳು ವರ್ಷ ಪೂರೈಕೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಕಾಂಗ್ರೆಸ್ ನಡಿಗೆ ಜನರ ಬಳಿಗೆ’ ಕಾರ್ಯಕ್ರಮವನ್ನು ನಾನು ಪ್ರಾರಂಭಿಸಿದ್ದು, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದೆವು. ಒಬ್ಬರೇ ಹೋಗುವುದು ಸರಿಯಲ್ಲವೆಂದು ಈ ನಿರ್ಧಾರ ತೆಗೆದುಕೊಂಡಿದ್ದೆವು. ಒಗ್ಗಾಟ್ಟಾಗಿ ಹೋದರೆ ಜಯ ಎಂಬುದು ನಮ್ಮ ನಿಲುವಾಗಿತ್ತು. ನನ್ನ ನೇತೃತ್ವದಲ್ಲೇ ಚುನಾವಣೆ ಎಂಬ ಸಿಎಂ ಹೇಳಿಕೆಗೆ ಪರಮೇಶ್ವರ್ ತಿರುಗೇಟು ನೀಡಿದರು.

ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ. ಜನರಿಗೆ ನಮ್ಮ ಯೋಜನೆ ತಲುಪಿಸಬೇಕಿದೆ. ಹೀಗಾಗಿ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಹಮ್ಮಿಕೊಂಡಿದ್ದೇವೆ. ೨೨೪ ಕ್ಷೇತ್ರಗಳಿವೆ. ೫೪ ಸಾವಿರ ಬೂತ್ ಗಳಿವೆ. ಬೂತ್ ಗೆ ಸದಸ್ಯರನ್ನ ನೇಮಿಸಿದ್ದೇವೆ. ೬.೫೦ ಲಕ್ಷ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಯೋಜನೆಗಳನ್ನ ಅವರು ಮನೆಮನೆಗೆ ತಲುಪಿಸುತ್ತಿದ್ದಾರೆ. ಇದು ಪಕ್ಷದ ಮಾಸ್ ಮೂವ್ ಮೆಂಟ್. ಕೆಲವು ಭಾರಿ ಜನ ನಮ್ಮನ್ನ ಆಶೀರ್ವದಿಸುತ್ತಿದ್ದರು. ಕೆಲವೊಮ್ಮೆ ತಿರಸ್ಕರಿಸಿದ್ದರು. ಈ ಭಾರಿ ಜನ ನಮ್ಮನ್ನ ಮತ್ತೆ ಅಧಿಕಾರಕ್ಕೆ ತರುತ್ತಾರೆಂಬ ವಿಶ್ವಾಸವಿದೆ ಎಂದರು.

ಜಾರ್ಜ್ ವಿರುದ್ಧ ಸಿಬಿಐ ಎಫ್ ಐಆರ್ ದಾಖಲು ವಿಚಾರವಾಗಿ ಮಾತನಾಡಿದ ಅವರು, ಒಂದು ಭಾರಿ ಎಫ್ ಐಆರ್ ದಾಖಲಾದರೆ ಮತ್ತೆ ಎಫ್ ಐಆರ್ ದಾಖಲು ಮಾಡಲು ಅವಕಾಶವಿಲ್ಲ. ಒಂದೇ ಪ್ರಕರಣದಲ್ಲಿ ಎರಡು ಭಾರಿ ಎಫ್ ಐಆರ್ ದಾಖಲು ಮಾಡಲು ಬರುವುದಿಲ್ಲ. ಸುಪ್ರೀಂ ಆದೇಶದ ಸಿಬಿಐ ಮತ್ತೆ ರೀರಿಜಿಸ್ಟರ್ ಮಾಡಿದೆ. ಗಣಪತಿ ಪ್ರಕರಣದ ಕೇಸ್ ರೀರಿಜಿಸ್ಟರ್ ಮಾಡಿದೆ. ಬಿಜೆಪಿಯವರು ಮತ್ತೆ ಎಫ್ ಐಆರ್ ಆಗಿದೆ ಅಂತ ಹೇಳ್ತಿದ್ದಾರೆ. ಈ ವಿಚಾರದಲ್ಲಿ ಅವರಿಗೆ ಸರಿಯಾಗಿ ಅರ್ಥವಾಗಿಲ್ಲ. ರಾಜಕೀಯಕ್ಕೆ ಈ ವಿಚಾರವನ್ನು ಬಳಸಿಕೊಂಡು ಜಾರ್ಜ್ ರಾಜೀನಾಮೆಗೆ ಆಗ್ರಹಿಸಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಜಾರ್ಜ್ ರಾಜೀನಾಮೆ ಅಗತ್ಯವಿಲ್ಲ ಎಂದು ಹೇಳಿದರು.

ಬಿಜೆಪಿ ಸಂಸದರ ಮೇಲೆ ೧೧೧ ಕೇಸ್ ಗಳಿವೆ. ೧೧ ಸಂಸದರ ಮೇಲೆ ಮರ್ಡರ್ ಕೇಸ್ ಗಳಿವೆ. ೧೧೧೨ ಚಾರ್ಜಸ್ ಇದ್ದಾವೆ. ೧೭ ಜನ ಸಂಸದರ ವಿರುದ್ಧ ಕ್ರಿಮಿನಲ್ ಕೇಸ್ ಗಳಿವೆ. ೪ ಕೇಂದ್ರ ಸಚಿವರ ವಿರುದ್ಧ ಕೇಸ್ ಗಳಿವೆ. ಬಿಜೆಪಿ ೧೨ ಶಾಸಕರ ವಿರುದ್ವ ವಿವಿಧ ಪ್ರಕರಣಗಳಿವೆ. ಎಸ್.ಸುರೇಶ್ ಕುಮಾರ್, ಆನಂದ್ ಸಿಂಗ್,ಎಸ್.ಮುನಿರಾಜು, ಶ್ರೀರಾಮುಲು, ಸಿ.ಟಿ.ರವಿ, ಚಂದ್ರಕಾಂತ್ ಬೆಲ್ಲದ್, ಬಿಎಸ್ವೈ, ಶೋಭಾ ವಿರುದ್ಧವೂ ಕೇಸ್ ಗಳಿವೆ ಎಂದರು.

ಸಿಎಂ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ. ಆಗಂತ ನಮ್ಮ ಹೈಕಮಾಂಡ್ ಹೇಳಿದೆ. ಅದನ್ನ ನಾವು ಒಪ್ಪಿಕೊಂಡಿದ್ದೇವೆ. ಯೋಜನೆಗಳನ್ನ ಮುಂದಿಟ್ಟುಕೊಂಡೇ ಚುನಾವಣೆ ಎದುರಿಸುತ್ತೇವೆ. ಮುಂದೆಯೂ ನಾವೇ ಗೆದ್ದು ಬರುತ್ತೇವೆ. ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಮಾತನಾಡಿದ ಅವರು, ಕ್ಷೇತ್ರವಾರು ಗೆಲ್ಲುವ ಅಭ್ಯರ್ಥಿಗಳ ಆಯ್ಕೆ ಎಂದು ಎಐಸಿಸಿ ಈಗಾಗಲೇ ಸೂಚನೆ ನೀಡಿದೆ. ಅಭ್ಯರ್ಥಿಗಳ ಪಟ್ಟಿ ನೀಡುವಂತೆ ತಿಳಿಸಿದೆ. ಉತ್ಸಾಹಿ ಯುವಜನತೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ೧೧೩ ಸೀಟುಗಳನ್ನ ಗೆದ್ದೇ ಗೆಲ್ಲುತ್ತೇವೆ. ಗೆಲ್ಲುವವರಿಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ಹೇಳಿದರು. (ವರದಿ-ಎಸ್.ಎನ್, ಎಂ.ಎನ್)

 

Leave a Reply

comments

Related Articles

error: