ಕರ್ನಾಟಕ

ರಂಭಾಪುರಿ ಸ್ವಾಮಿಜಿ ಶಿಷ್ಯನ ರಾಸಲೀಲೆ ಪ್ರಕರಣ : 3ನೇ ದಿನಕ್ಕೆ ಕಾಲಿಟ್ಟ ಸತ್ಯಾಗ್ರಹ

ರಾಜ್ಯ(ಚಿಕ್ಕಬಳ್ಳಾಪುರ)ಅ.28:- ರಂಭಾಪುರಿ ಸ್ವಾಮಿಜಿ ಶಿಷ್ಯನ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹೋ ರಾತ್ರಿ ಉಪವಾಸ ಸತ್ಯಾಗ್ರಹ 3ನೇ ದಿನಕ್ಕೆ ಕಾಲಿಟ್ಟಿದೆ.

ಹುಣಸಮಾರನ ಹಳ್ಳಿ ಜಂಗಮಮಠದ ಮುಂದೆ ಟ್ರಸ್ಟ್ ಸದಸ್ಯರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.ಕಾಮಿ ಸ್ವಾಮಿ ಬಂಧಿಸುವಂತೆ ಆಗ್ರಹಿಸಿದ್ದು, ಕಾಮಿ ಸ್ವಾಮಿಯ ಕುಟುಂಬದ ಸದಸ್ಯರನ್ನು ಮಠದಿಂದ ಹೊರಹಾಕುವಂತೆ ಪಟ್ಟು ಹಿಡಿದಿದ್ದಾರೆ. ಮಠದಿಂದ ಪರಾರಿಯಾಗಿರುವ ಕಾಮಿ ಸ್ವಾಮಿಗಾಗಿ ಪೋಲಿಸರು ಹುಟುಕಾಟ ನಡೆಸಿದ್ದಾರೆ. ಸತ್ಯಾಗ್ರಹಿಗಳ ವಿರುದ್ದ ಮಠದ ಭಕ್ತರು ಸಿಡಿದೆದ್ದಿದ್ದಾರೆ. ಗ್ರಾಮಸ್ಥರು ಮತ್ತು ಪಂಚಾಯತ್ ಸದಸ್ಯರು ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.  ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ 2 ಕೆಎಸ್ ಆರ್ ಪಿ ತುಕಡಿ ನಿಯೋಜಿಸಲಾಗಿದ್ದು,  100 ಕ್ಕೂ ಹೆಚ್ಚು ಪೊಲೀಸರ ಕಾವಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: