ಸುದ್ದಿ ಸಂಕ್ಷಿಪ್ತ

ಉಚಿತ ಆರೋಗ್ಯ ತಪಾಸಣಾ ಶಿಬಿರ ಅ.29.

ಮೈಸೂರು,ಅ.28 : ಭೂಮಿಗಿರಿ ನಾರಾಯಣಪ್ಪನವರ ಸ್ಮರಣಾರ್ಥ ವಿನಾಯಕನಗರದ ಗ್ರಾಮಾಭ್ಯುದಯ ಟ್ರಸ್ಟ್, ಸುಯೋಗ್ ಆಸ್ಪತ್ರೆ ಹಾಗೂ ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅ.29ರ ಬೆಳಗ್ಗೆ 9.30 ರಿಂದ ವಿನಾಯಕನಗರದ ಮಹದೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದೆ.

ರಾಮಕೃಷ್ಣಾಶ್ರಮದ ಸ್ವಾಮಿ ಶಾಂತಿವೃತಾನಂದ ಮಹಾರಾಜ್ ಸಾನಿಧ್ಯ ವಹಿಸುವರು, ಶಾಸಕ ವಾಸು ಉದ್ಘಾಟಿಸುವರು, ಸಾಹಿತಿ ಡಾ.ಮಳಲಿ ವಸಂತಕುಮಾರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ.ಸಿ.ಪಿ.ಕೆ, ಡಾ.ಎಸ್.ಪಿ.ಯೋಗಣ್ಣ, ಪಾಲಿಕೆ ಸದಸ್ಯೆ ರಾಜೇಶ್ವರಿ ಸೋಮು ಮೊದಲಾದವರು ಭಾಗಿಯಾಗುವರು. (ಕೆ.ಎಂ.ಅರ್)

Leave a Reply

comments

Related Articles

error: