ಸುದ್ದಿ ಸಂಕ್ಷಿಪ್ತ

ಶ್ರೀ ಮಲೆ ಮಹದೇಶ್ವರ ಸ್ವಾಮಿ ಕಾರ್ತಿಕ ರಥೋತ್ಸವ ಅ.30.

ಮೈಸೂರು,ಅ.29 : ಕಾರ್ತಿಕ ಮಾಸದ ಅಂಗವಾಗಿ ಲಷ್ಕರ್ ಮೊಹಲ್ಲಾದ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ 2ನೇ ಕಾರ್ತಿಕ ಸೋಮವಾರದಂದು (ಅ.30ರ) ದೇವಸ್ಥಾನದ 40 ವರ್ಷದ ಕಾರ್ತಿಕ ಮಾಸದ ರಥೋತ್ಸವವನ್ನು ಆಯೋಜಿಸಿದೆ.

ಅಂದು ಬೆಳಗಿನ ಬ್ರಾಹ್ಮಿ ಮುಹೂರ್ತದಿಂದಲೇ ಸ್ವಾಮಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿಶೇಷ ಪೂಜೆ ನಡೆಯುವುದು. ನಂತರ 10.30ರಿಂದ ಮಂಗಳವಾಧ್ಯಗಳೊಂದಿಗೆ ಆರಂಭವಾಗುವ ರಥೋತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ಸುತ್ತುವುದು. ಬೀಸು ಕಂಸಾಳೆ, ಗೊರವರ ಕುಣಿತ, ನಗಾರಿ, ಬೀರೇಶ್ವರ ಕುಣಿತ, ಪೂಜಾ ಕುಣಿತ ಮೊದಲಾದ ತಂಡಗಳು ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ರಥೋತ್ಸವದಲ್ಲಿ ಭಾಗಿಯಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: