ಮೈಸೂರು

ಆರ್ಥಿಕ ಮತ್ತು ಸಾಮಾಜಿಕ ಸ್ವಾಲಂಬನೆಗೆ  ಕಾಂಗ್ರೆಸ್ ಸರ್ಕಾರ ಭದ್ರ ಬುನಾದಿ ಹಾಕಿದೆ : ಡಾ.ಬಿ.ಜೆ.ವಿ.

ಮೈಸೂರು (ಬೈಲುಕುಪ್ಪೆ),ಅ.30:-  ಸ್ವತಂತ್ರ ಭಾರತದ 68 ವರ್ಷದ ಸುದೀರ್ಘ ಸಮಯದಲ್ಲಿ ಇಂದಿನ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಕೆಲವು ಐತಿಹಾಸಿಕ ಜನಪರ ಯೋಜನೆಗಳನ್ನು ದೀರ್ಘಾವಧಿಯಾಗಿ ರೂಪಿಸಿರುವುದರಿಂದ ಹಾಗೂ ಅನುಷ್ಠಾನಗೊಳಿಸಿರುವುದರಿಂದ ರಾಜ್ಯದ ಜನತೆಯ ಆರ್ಥಿಕ ಮತ್ತು ಸಾಮಾಜಿಕ ಸ್ವಾವಲಂಬನೆಗೆ ಭದ್ರ ಬುನಾದಿ ಹಾಕಿದ ಹೆಗ್ಗಳಿಕೆ ಸಿದ್ದರಾಮಯ್ಯನವರಿಗೆ  ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ.ವಿಜಯ್‍ಕುಮಾರ್ ತಿಳಿಸಿದ್ದಾರೆ.

ಅವರು ಪಿರಿಯಾಪಟ್ಟಣದ ಆಲನಹಳ್ಳಿ ಗ್ರಾಮದಲ್ಲಿ ಭಾನುವಾರ ಮನೆ ಮನೆಗೆ ಕಾಂಗ್ರೆಸ್ ಎಂಬ ಸರ್ಕಾರದ ಯೋಜನೆಗಳ ಕಿರು ಹೊತ್ತಿಗೆಯನ್ನು ಗ್ರಾಮದ ಮನೆಗಳಿಗೆ ನೀಡಿ ಮಾತನಾಡಿದ ಅವರು, ಹಿಂದಿನ ಸರ್ಕಾರಗಳು ಕೇವಲ ಅಲ್ಪಾವಧಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜಕೀಯ ತಂತ್ರಗಾರಿಕೆ ಹಾಗೂ ಚುನಾವಣೆಗಾಗಿಯೇ ಕೆಲವು ಮೀಸಲು ಕಾರ್ಯಕ್ರಮಗಳನ್ನು ಸೀಮಿತಗೊಳಿಸಿದ್ದು ದುರಂತ. ಆದ್ದರಿಂದಲೇ ರಾಜ್ಯದಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ.

ಜೊತೆಗೆ ಸಂವಿಧಾನದ ಮೂಲಾಶಯಗಳಲ್ಲಿ ಒಂದಾದ ಅತ್ಯಂತ ಮಹತ್ವದ ರಾಜ್ಯ ನಿರ್ದೇಶಕ ತತ್ವಗಳನ್ನ ಯಥಾವತ್ತಾಗಿ ಹಾಗೂ ಪರಿಣಾಮಕಾರಿಯಾಗಿ ಇಲ್ಲಿಯವರೆಗೆ ಜಾರಿಗೆ ತರಲು ಬಹಳಷ್ಟು ಸರ್ಕಾರಗಳಿಗೆ ಸಾಧ್ಯವಾಗಲಿಲ್ಲ. ಉದಾಹರಣೆಗೆ ಮೂಲಭೂತ ಹಕ್ಕುಗಳಾದ ಆಹಾರ, ಶಿಕ್ಷಣ, ವಸತಿ ಈ ಕಾರ್ಯಕ್ರಮಗಳು ಹಾಗೂ ಮೂಲ ಸವಲತ್ತುಗಳು ದೇಶದ ಬಹಳಷ್ಟು ರಾಜ್ಯಗಳಲ್ಲಿ ಗಂಭೀರವಾದ ಹಿನ್ನೆಡೆಯನ್ನ ಅನುಭವಿಸಿದೆ. ಅಷ್ಟೇ ಅಲ್ಲದೇ 1956 ರ ಭೂ ಸುಧಾರಣ ಕಾಯಿದೆಗೆ ಹಲವಾರು ರೀತಿಯ ತಿದ್ದುಪಡಿಗಳಿಗೆ ಹಿಂದಿನ ಸರ್ಕಾರಗಳು ಶ್ರಮ ವಹಿಸಿದರೂ ಕೂಡ ಪೂರ್ಣ ಪ್ರಮಾಣದ ಅನುಷ್ಠಾನಕ್ಕೆ ಹಿನ್ನಡೆಯಾಯಿತು. ಈ ಸಂದರ್ಭದಲ್ಲಿ ಇಂದಿನ ರಾಜ್ಯ ಸರ್ಕಾರ ಐತಿಹಾಸಿಕ ಬಡ ಮತ್ತು ಹಿಂದುಳಿದ ವರ್ಗದ ಹಿತಾದೃಷ್ಟಿಯಿಂದ ಅಕ್ರಮಗೊಳಿಸಿಕೊಂಡಿದ್ದ ಆಸ್ತಿ ಇನ್ನಿತರ ವಸತಿ ನಿವೇಶನಗಳನ್ನು ಸಕ್ರಮಗೊಳಿಸಿದ್ದು ಒಂದು ದೊಡ್ಡ ಪರ್ವಕಾಲ. ಈಗ ದೇಶದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ನೀತಿಗೆ ಕಾನೂನಿನ ಅಂಗೀಕಾರದ ಸಿದ್ಧತೆಯಲ್ಲಿದೆ. ಇದರಿಂದ ಮಂಗಳಮುಖಿಯರು ಎಂಬ ಲಿಂಗತ್ವ ಅಲ್ಪಸಂಖ್ಯಾತರಿಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಇವರನ್ನು ಹಿಂದುಳಿದ ವರ್ಗ ಎಂದು ಪರಿಗಣಿಸಿ ಶಿಕ್ಷಣ ಮತ್ತು ಸರ್ಕಾರದ ನೇಮಕಾತಿಗಳಲ್ಲಿ ಮೀಸಲಾತಿ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಆದ್ದರಿಂದ ಈ ಯೋಜನೆ ಸಂವಿಧಾನದ ಮೂಲ ಆಶಯಗಳಿಗೆ ಇಡೀ ದೇಶದಲ್ಲಿ ಮಾದರಿಯಾಗಿದೆ. ಇದರ ಜೊತೆಗೆ ಈ ಹಿಂದೆ 4 ವರ್ಷಗಳಲ್ಲಿ ಜಾರಿಗೊಂಡ ಹಸಿವು ಮುಕ್ತ ಕರ್ನಾಟಕ ಅನ್ನಭಾಗ್ಯ, ಋಣಮುಕ್ತ, ಯಶಸ್ವಿನಿ, ಮನಸ್ವಿನಿ, ಮಾತೃಪೂರ್ಣ, ಆನ್‍ಲೈನ್‍ನಲ್ಲಿ ರೈತರ ಕೃಷಿ ಉತ್ಪನ್ನಗಳ ಖರೀದಿ ಮಾರುಕಟ್ಟೆ, ಅಲ್ಪಸಂಖ್ಯಾತ ಹಿಂದುಳಿದ ಹಾಗೂ ದಲಿತ ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಸ್ವಾವಲಂಬನೆ ಹಾಗೂ ಸಾಮಾಜಿಕ ಭದ್ರತೆಗಾಗಿ ಸುಮಾರು 45 ಸಾವಿರ ಕೋಟಿ ಮೀಸಲಿರಿಸಿದ್ದು ದೇಶದಲ್ಲಿ ಮಾದರಿಯಾಗಿದೆ. ನಾಲ್ಕು ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ರೈತರ ಬದುಕಿಗೆ ಅಂದರೆ ಕೃಷಿ ಕ್ಷೇತ್ರವನ್ನು ಬಲಪಡಿಸಲು ತೆಗೆದುಕೊಂಡ ಕಾನೂನು ನಿರ್ಣಯಗಳು ಅತ್ಯಂತ ವಿಶೇಷ. ಆದ್ದರಿಂದ ಹಲವಾರು ರಾಜಕೀಯ ಪಕ್ಷಗಳು ಚುನಾವಣೆ ಸಮೀಪಿಸಿದ ತಕ್ಷಣ ನೂರಾರು ಪೊಳ್ಳು ಘೋಷಣೆಗಳ ಮೂಲಕ ಜನವರ್ಗವನ್ನು ದಿಕ್ಕು ತಪ್ಪಿಸುವುದು ಅಷ್ಟು ಸುಲಭದ ಮಾತಲ್ಲ. ಆದ್ದರಿಂದ ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನು ನ್ಯಾಯ ಸಮ್ಮತವಾಗಿ ಪರಿಶೀಲಿಸಿ ಅದರ ಆಧಾರದಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದಂತಹ ಐತಿಹಾಸಿಕ ನಿಲುವನ್ನು ತೆಗೆದುಕೊಳ್ಳಬೇಕೆಂದು ಡಾ.ಬಿ.ಜೆ.ವಿಜಯ್‍ಕುಮಾರ್ ಗ್ರಾಮದ ಜನತೆಯಲ್ಲಿ ವಿನಂತಿಸಿದರು. ಮನೆ-ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಕುಳ್ಳೇಗೌಡ, ಯಜಮಾನ ರಾಜಣ್ಣ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡೈರಿ ಸೋಮಣ್ಣ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ರಾಜು, ಗ್ರಾ.ಪಂ. ಅಧ್ಯಕ್ಷ ಕುಮಾರ್, ಗ್ರಾ. ಪಂ. ಸದಸ್ಯರಾದ ಆಲನಹಳ್ಳಿ ರಾಜು, ಸಣ್ಣಕ್ಕಸ್ವಾಮಿ, ಪ್ರೇಮಸ್ವಾಮಿ, ಯಜಮಾನ ತಮ್ಮೇಗೌಡ, ಯಜಮಾನ ಜವರೇಗೌಡ, ಪಟೇಲ್ ಸೋಮಣ್ಣ, ಯುವ ಮುಖಂಡರಾದ ಹರೀಶ್ ನಾಯಕ್, ಪ್ರದೀಪ್, ಅಶೋಕ್, ಬಸವರಾಜು, ಸ್ವಾಮಿ, ಡಿ.ರಾಜು, ಶ್ರೀನಿವಾಸ್, ಭೂತನಹಳ್ಳಿ ರವಿ, ರಾಜೇಗೌಡ, ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು. (ಆರ್.ಬಿ.ಆರ್,ಎಸ್.ಎಚ್)

 

Leave a Reply

comments

Related Articles

error: