ಮೈಸೂರು

ಕಿಕ್ ಬಾಕ್ಸಿಂಗ್ : ಮೈಸೂರಿಗೆ 2 ರಜತ, 2 ಕಂಚು

ಆಂಧ್ರದ ವಿಶಾಖಾಪಟ್ಣಂನ ಸ್ವರ್ಣಭಾರತಿ ಸ್ಟೇಡಿಯಂನಲ್ಲಿ ನಡೆದ ಕಿಕ್  ಬಾಕ್ಸಿಂಗ್  ಚಾಂಪಿಯನ್ ಶಿಪ್ 2016 ಮೈಸೂರಿನ ಇಬ್ಬರು ಕಿಕ್ ಬಾಕ್ಸರ್ ಎರಡು ರಜತ ಹಾಗು ಎರಡು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

29 ರಾಜ್ಯಗಳ 700 ಸ್ಪರ್ಧಾಳುಗಳು ಭಾಗವಹಿಸಿದ್ದರು. 75 ಕೆಜಿ ಕಿಕ್ ಬಾಕ್ಸಿಂಗ್ ವಿಭಾಗದಲ್ಲಿ ಇಂಚರ್ ಭವಿತ್ ಬಿ.ಎನ್. ಮಹಾರಾಷ್ಟ್ರ ಮತ್ತು ಉತ್ತರಾಖಂಡದ ತಮ್ಮ ಪ್ರತಿಸ್ಪರ್ಧಿಯನ್ನು ಮಣಿಸಿ ರಜತ ಪದಕವನ್ನು ತಮ್ಮದಾಗಿಸಿಕೊಂಡರು.

69 ಕೆಜಿ ಕಿಕ್ ಬಾಕ್ಸಿಂಗ್ ನಲ್ಲಿ ಸಯ್ಯದ್ ಸಮೀರ್ ಆ ಹುಸೈನಿ ರಜತ ಪದಕವನ್ನು ತಮ್ಮದಾಗಿಸಿಕೊಂಡರೆ, ಮಿಡ್ಲ್ ವ್ಹೇಟ್ ನಲ್ಲಿ ರಾಹುಲ್ ರಾವ್ ಎಸ್. ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

Leave a Reply

comments

Tags

Related Articles

error: