ಮೈಸೂರು

ಪುಣೆಯಿಂದ ಮೈಸೂರಿಗೆ ಬಂತು ಪಾತ್ ಹೋಲ್ ಮುಚ್ಚುವ ಮಿಷನ್

ಮೈಸೂರು,ಅ.30-ನಗರದ ರಸ್ತೆಗಳಲ್ಲಿನ ಗುಂಡಿ ಮುಚ್ಚೋದು ಇನ್ನು ಮುಂದೆ ತುಂಬಾ ಸಲೀಸಾಗಲಿದ್ದು, ಮೈಸೂರಿಗೆ ಪಾತ್ ಹೋಲ್ ಮುಚ್ಚುವ ಮಿಷನ್ ಬಂದಿದೆ. ಸೋಮವಾರ ಪ್ರಾಯೋಗಿಕ ನೀಡಲು ಪುಣೆಯಿಂದ ಮೈಸೂರಿಗೆ ಯಂತ್ರ ಬಂದಿದ್ದು, ಅಧಿಕಾರಿಗಳ ಸಮ್ಮುಖದಲ್ಲಿ ಇಂದು ಡೆಮಾಸ್ಟ್ರೇಷನ್ ನಡೆಯಿತು.

ಮಿಷಿನ್ ನಿಂದ ಕೆಲವೇ ನಿಮಿಷಗಳಲ್ಲಿ ಪಾಥ್ ಹೋಲ್ ಗೆ ಮುಕ್ತಿ ಸಿಗಲಿದ್ದು, ಒಂದು ಸ್ಕ್ವೇರ್ ಮೀ.ಗೆ 2.5 ಸಾವಿರ ವೆಚ್ಚವಾಗಲಿದೆ. ಆದರೆ, ಹಳೆಯ ವಿಧಾನಕ್ಕಿಂತ 5 ಪಟ್ಟು ಹೆಚ್ಚು ನೂತನ ವಿಧಾನದ ವೆಚ್ಚ ಹೆಚ್ಚಾಗಿದೆ. ಹಳೆಯ ವಿಧಾನದ ಡಾಂಬರಿಕರಣಕ್ಕೆ 500ರೂ ವೆಚ್ಚ, ೧ ವರ್ಷ ಗ್ಯಾರೆಂಟಿ. ಆದರೆ ನೂತ‌ನ ವಿಧಾನಕ್ಕೆ 2.5 ಸಾವಿರ ವೆಚ್ಚ, ೨ ವರ್ಷ ಗ್ಯಾರೆಂಟಿ ಸಿಗಲಿದೆ.

ರೋಡ್ ಡಾಕ್ಟರ್ ಎಂಬ ಪುಣೆ ಕಂಪನಿಯ ಮಿಷಿನ್ ಇದಾಗಿದ್ದು, ಕಂಪನಿಯ ಸಂಪೂರ್ಣ ಜವಾಬ್ದಾರಿಯಲ್ಲೇ ಗುಂಡಿ ಮುಚ್ಚುವ ಕೆಲಸ ನಡೆಯಲಿದೆ. ಜಿಲ್ಲಾಧಿಕಾರಿ ಡಿ.ರಂದೀಪ್, ಮಹಾಪೌರ ಎಂ.ಜೆ.ರವಿಕುಮಾರ್ ಅವರು ಯಂತ್ರದ ಪ್ರಾಯೋಗಿಕ ಪರಿಶೀಲನೆ ಮಾಡಿದರು. ರಾಜ್ಯ ಸರ್ಕಾರದಿಂದ ಗುಂಡಿ ಮುಚ್ಚುವ ಕೆಲಸಕ್ಕೆ ಈಗಾಗಲೇ 10 ಕೋಟಿ ಬಿಡುಗಡೆ ಮಾಡಲಾಗಿದೆ.

ನಗರಪಾಲಿಕೆ ಎಇಇ ನಾಗರಾಜು, ಹರಿಕುಮಾರ್, ಮಿಷಿನ್ ಸಂಸ್ಥೆಯ ಉಪಾಧ್ಯಕ್ಷ ಸೇರಿದಂತೆ ಇತರರು ಉಪಸ್ಥಿತರಿದ್ದರು. (ವರದಿ-ಎಸ್.ಎನ್, ಎಂ.ಎನ್)

 

Leave a Reply

comments

Related Articles

error: