ಮೈಸೂರು

ಸ್ವಾಯತ್ತತೆಗೆ ಒತ್ತಾಯಿಸಿ ನ.1ರಂದು ಸಿಎನ್ ಸಿಯಿಂದ ದೆಹಲಿ ಚಲೋ

ಮೈಸೂರು, ಅ. 30 : ಕೊಡವ ಲ್ಯಾಂಡ್ ಹಕ್ಕೊತ್ತಾಯ ಮಂಡನೆ, ಸಂವಿಧಾನ ತಿದ್ದುಪಡಿ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ ಸಿ) ನಿಂದ ನ.1ರಂದು ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಿಎನ್.ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಕೊಡವ ತಿಳಿಸಿದರು.

ಕೊಡಗು ಸೇರಿದಂತೆ ರಾಜ್ಯ, ಹೊರರಾಜ್ಯಗಳಲ್ಲಿರುವ 500ಕ್ಕೂ ಹೆಚ್ಚು ಕೊಡವರು ದೆಹಲಿ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ರಾಜ್ಯಸಭಾ ಸದಸ್ಯ ಡಾ.ಸುಬ್ರಹ್ಮಣ್ಯ ಸ್ವಾಮಿ ಸೇರಿದಂತೆ ವಿವಿಧ ಗಣ್ಯರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬೇಡಿಕೆ : ಲಡಾಕ್ ಗಿರಿಮಂಡಳಿ, ಬೋಡೋಲ್ಯಾಂಡ್, ಗೂರ್ಖಾ ಲ್ಯಾಂಡ್ ಈಶಾನ್ಯ ಭಾರತದ ಗಿರಿಮಂಡಳಿ ಮಾದರಿಯಲ್ಲಿ ಸಂವಿಧಾನದ 6ನೇ ಷೆಡ್ಯೂಲ್ ಪ್ರಕಾರ ಕೊಡಗಿಗೆ ವಿಶೇಷ ಸ್ವಾಯತ್ತತೆ ನೀಡಬೇಕು. 2 ಮತ್ತು 3ನೇ ವಿಧಿ ಪ್ರಕಾರ ಕೊಡವ ಲ್ಯಾಂಡ್, ಕೇಂದ್ರಾಡಳಿತ ಪ್ರದೇಶ ರಚಿಸಬೇಕೆಂದು ಒತ್ತಾಯಿಸಲಾಗುವುದು ಎಂದು ಹೇಳಿದರು.

ಕ್ಷಾತ್ರ ಕೊಡವರಿಗೆ ಬುಡಕಟ್ಟು ಜನಾಂಗದ ಸ್ಥಾನಮಾನ ನೀಡಬೇಕು, ಸಂವಿಧಾನ ಪರಾಮರ್ಶೆ ಆಯೋಗದ ಶಿಫಾರಸ್ಸಿನಂದ ಕೊಡಗು ಅಭಿವೃದ್ಧಿ ಮಂಡಳಿ ರಚಿಸಬೇಕು, ಆಂಗ್ಲೋ ಇಂಡಿಯನ್ ಸಮುದಾಯದ ಮಾದರಿಯಲ್ಲಿ ಕೊಡವರಿಗೂ ರಾಜಕೀಯ ಮೀಸಲಾತಿ ನೀಡಿ, ಕೋವಿ ಹೊಂದಲಿರುವ ವಿನಾಯಿತಿ ಹಕ್ಕು ಆಬಾಧಿತವಾಗಿ ಮುಂದುವರೆಸಬೇಕು, ಅಲ್ಪ ಸಂಖ್ಯಾತ ಸಾಂಸ್ಕೃತಿ ಕೊಡವ ಬುಡಕಟ್ಟು ಕುಲವನ್ನು ಯುನೆಸ್ಕೋದ ಇಟ್ಯಾಂಜಿಂಬಲ್ ಕಲ್ಚರಲ್ ಸೇರಿಸಬೇಕು ಎಂದು ಆಗ್ರಹಿಸಲಾಗುವುದು ಎಂದರು.

ಕೊಡಗು ಕೂಡ ಕಾಶ್ಮೀರದಂತೆ ಸೂಕ್ಷ್ಮ ಪ್ರದೇಶವಾಗಿದ್ದು ಭಯೋತ್ಪಾದಕ ಹಾಗೂ ಮೂಲಭೂತವಾದಿಗಳಿಗೆ ತಾಣವಾಗುತ್ತಿದೆ, ಇದು ಸ್ಥಳೀಯ ಕೊಡವರ ಅಸ್ತಿತ್ವಕ್ಕೆ ಬಹುದೊಡ್ಡ ಗಂಡಾಂತರವಾಗಿ ಪರಿಣಮಿಸುವ ಲಕ್ಷ್ಮಣವಿದೆ ಆದ್ದರಿಂದ ಈ ಬಗ್ಗೆ ಸರ್ಕಾರ ಈಗಲೇ ಎಚ್ಚೆತ್ತು ರಾಷ್ಟ್ರೀಯ ತನಿಖಾದಳ, ‘ರಾ’ ಮಾದರಿ ಶಾಶ್ವತ ತಂಡವನ್ನು ಸ್ಥಾಪಿಸಬೇಕು, ಕೊಡವ ಬುಡಕಟ್ಟು ಕುಲದ ಜೀವನದಿ ಕಾವೇರಿಗೂ ಲಿವಿಂಗೆ ಎಂಟಿಟಿ ಹ್ಯಾವಿಂಗ್ ದಿ ಸ್ಟೇಟಸ್ ಆಫ್ ದ ಲೀಗಲ್ ಪರ್ಸನ್ ಸ್ಥಾನಮಾನ ನೀಡಬೇಕು, ಗಂಗೆ, ಯಮುನಾ, ನರ್ಮದಾ ನದಿಗಳಂತೆ ಕಾವೇರಿಯನ್ನು ಕಾಪಾಡಲು ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು

ಹೊರಗಿನಿಂದ ಬಂದವರು ಕೊಡವರ ಭೂಮಿಯನ್ನು ದುಪ್ಪಟ್ಟು ಹಣ ನೀಡಿ ಆಸೆ ಆಮಿಷಗಳಿಂದ ಖರೀದಿಸುತ್ತಿದ್ದು, ನಮ್ಮನ್ನು ಒಕ್ಕಲೆಬ್ಬಿಸಲು ವ್ಯವಸ್ಥಿತ ಪಿತ್ತೂರಿ ನಡೆಸುತ್ತಿದ್ದಾರೆ, ಅಲ್ಲದೇ ಭೂಗತರು ಕೊಡಗನ್ನು ಭಯೋತ್ಪಾದಕರ ತಾಣ ಮಾಡಲು ಮುಂದಾಗುತ್ತಿದ್ದು ಇದಕ್ಕೆ ಕೆಲ ರಾಜಕೀಯ ವ್ಯಕ್ತಿಗಳ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.

ಟಿಪ್ಪು ಜಯಂತಿ ಅನವಶ್ಯ :

ಸರ್ಕಾರ ಆಯೋಜಿಸುತ್ತಿರುವ ಟಿಪ್ಪು ಜಯಂತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕೊಡವರನ್ನು ಮಾರಣಹೋಮ ಮಾಡಿದ ಟಿಪ್ಪು ಜಯಂತಿಯನ್ನು ಆಚರಿಸುವ ಮೂಲಕ ನಮ್ಮ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಇದನ್ನು ಖಂಡಿಸಿದರೆ ಸರ್ಕಾರದ ಬಾಡಿಗೆ ಭಂಟರ ಮೂಲಕ ಇತಿಹಾಸ ತಿರುಚುವ ಹೇಳಿಕೆ ನೀಡಿಸಿ, ನಮ್ಮನ್ನು ಬಲಪಂಥಿಯರೆಂದು ಬಿಂಬಿಸಲಾಗುತ್ತಿದೆ. ಕೋಮುಭಾವನೆ ಬಿತ್ತುವ ಟಿಪ್ಪು ಜಯಂತಿ ಅನವಶ್ಯಕವೆಂದು ಹೇಳಿದರು.

ಕಲಿಯಂಡ ಪ್ರಕಾಶ್, ಚಂಬಂಡ ಜನಕ್ ಕುಮಾರ್, ಕಿರಿಯಂಡ ಶರಿನ್, ಅಪ್ಪಾರಂಡ ರೀನಾ ಪೂವಣ್ಣ, ಅಪ್ಪಾರಂಡ ಪೂವಣ್ಣ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ( ವರದಿ : ಕೆ.ಎಂ.ಆರ್)

Leave a Reply

comments

Related Articles

error: