ಮೈಸೂರು

ಮುಂದಿನ ಐದು ದಿನ ಮೈಸೂರಿನಲ್ಲಿ ಮಳೆ ಬೀಳಲ್ಲ

ನವೆಂಬರ್ 9ರಿಂದ 13ರವರೆಗೆ ಮೈಸೂರು ಜಿಲ್ಲೆಯಲ್ಲಿ ಮಳೆ ಬೀಳುವ ಸಾಧ್ಯತೆಗಳಿಲ್ಲ. ದಿನದ ವಾತಾವರಣ 28ರಿಂದ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ರಾತ್ರಿ ವೇಳೆ 15ರಿಂದ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬೆಳಗಿನ ತೇವಾಂಶ ಶೇ.86ರಿಂದ 93, ಮಧ್ಯಾಹ್ನದ ಬಳಿಕ ಶೇ.41ರಿಂದ 53 ಇರಲಿದೆ. ಗಾಳಿಯ ವೇಗ ಪ್ರತಿ ಗಂಟೆಗೆ 4ರಿಂದ 7 ಕಿಮೀ ನಿರೀಕ್ಷಿಸಬಹುದು ಎಂದು ನಾಗನಹಳ್ಳಿ ಸಂಶೋಧನಾ ಕೇಂದ್ರ ತಿಳಿಸಿದೆ.

ಮೋಡ ಕವಿದ ವಾತಾವರಣದಿಂದ ಹೂ ಬಿಡುವ ಹಂತದಲ್ಲಿರುವ ಮೆಣಸಿನಕಾಯಿ ಬೆಲೆಗೆ ಹುಳದ ಬಾಧೆ ಹೆಚ್ಚಲಿದೆ. ಹುಳದ ಉಪಟಳವನ್ನು ತಡೆಯಲು, ಪ್ರತಿ ಲೀಟರ್ ನೀರಿಗೆ 1.7 ಎಮ್‍ಎಲ್ ರೋಗರ್ ಮತ್ತು 2.5 ಎಮ್‍ಎಲ್ ಡಿಕೊಟಲ್ ಸೇರಿಸಿ ಗಿಡಗಳ ಮೇಲೆ ಸಿಂಪಡಿಸಿ.

ಬದನೆಕಾಯಿ ಬೆಳೆಗೆ ಹುಳದ ಬಾಧೆ ತಡೆಯಲು ಪ್ರತಿ ಒಂದು ಲೀಟರ್ ನೀರಿಗೆ 5 ಎಮ್‍ಎಲ್‍ ನಿಂಬಿಸಿಡೈನ್ ಸೇರಿಸಿ ಚಿಮುಕಿಸಿ. ಭತ್ತದ ಫಸಲಿಗೆ ರೋಗ ಬಾರದಂತೆ ತಡೆಗಟ್ಟಲು ಪ್ರತಿ ಲೀಟರ್ ನೀರಿಗೆ 1 ಗ್ರಾಂ ಬವಿಸ್ಟಿನ್ ಸೇರಿಸಿ ಸಿಂಪಡಿಸಬಹುದು.

ನವೆಂಬರ್ 9ರಿಂದ 13ರವರೆಗಿನ ಹವಾಮಾನ ಮುನ್ಸೂಚನೆ

ಪಾರಾಮೀಟರ್09.11.201610.11.201611.11.201612.11.201613.11.2016
ಮಳೆ(ಮಿಮೀ)00000
ಗರಿಷ್ಠ ಉಷ್ಣಾಂಶ3130292828
ಕನಿಷ್ಠ ಉಷ್ಣಾಂಶ1717161615
ಮೋಡ ಪ್ರಮಾಣ (ಓಕ್ಟಾಸ್)32211
ತೇವಾಂಶ(%) 08.30ಗಂಟೆಗಳಲ್ಲಿ8686899093
ತೇವಾಂಶ(%) 17.30ಗಂಟೆಗಳಲ್ಲಿ5349414348
ಗಾಳಿಯ ವೇಗ (ಕಿ.ಮೀ/ಗಂಟೆ)75466
ಗಾಳಿಯ ದಿಕ್ಕು7075908080

 

 

Leave a Reply

comments

Related Articles

error: