ಸುದ್ದಿ ಸಂಕ್ಷಿಪ್ತ

ಅ.31ರಿಂದ ಕನ್ನಡ ರಾಜ್ಯೋತ್ಸವ ಸಪ್ತಾಹ : ನಾಡಿನ ಸಂಸ್ಕೃತಿ ಬಿತ್ತರ

ಮೈಸೂರು, ಅ. 30 : ಬೆಳಕು ಸಂಸ್ಥೆಯು ಕನ್ನಡ ರಾಜ್ಯೋತ್ಸವದ ಅಂಗವಾಗಿ ಇದೇ ಅ.31ರಿಂದ ನ.6ರವರೆಗೆ ರಾಜ್ಯೋತ್ಸವ ಸಪ್ತಾಹವನ್ನು ಹಮ್ಮಿಕೊಂಡಿದೆ.

ಅ.31 ರ ಬೆಳಗ್ಗೆ 11ಕ್ಕೆ ಮೈಸೂರು ಅರಮನೆಯ ದಕ್ಷಿಣದ ವರಹಾ ದ್ವಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಚೆನ್ನಪ್ಪ ಚಾಲನೆ ನೀಡುವರು.ಸಂಸ್ಥೆಯ ಸಂಚಾಲಕ ಕೆ.ಎಂ.ನಿಶಾಂತ್ ಮುಂತಾದವರು ಭಾಗವಹಿಸುವರು.

ಸಪ್ತಾಹದ ಅಂಗವಾಗಿ  ಕೇವಲ ಒಂದು ಗಂಟೆಯಲ್ಲಿ ಕನ್ನಡ ಕಲಿಯಿರಿ ಕಿರು ಮಾರ್ಗದರ್ಶಿ ಪುಸ್ತಕ, ಮೈಸೂರು ಪಾಕ್, ಮೈಸೂರು ಮಲ್ಲಿಗೆ, ಮೈಸೂರು ವೀಳೆದೆಲೆಯನ್ನು ವಿದೇಶಿ ಪ್ರವಾಸಿಗರಿಗೆ ವಿತರಿಸಿ ನಾಡಿನ ಸಂಸ್ಕೃತಿ ಬಿತ್ತರಿಸಲಾಗುವುದು.(ಕೆ.ಎಂ.ಆರ್)

Leave a Reply

comments

Related Articles

error: