ಮೈಸೂರು

ಆಯುಷ್‍ಗೆ ಪ್ರಶಸ್ತಿ ಪ್ರದಾನ

ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ(ಆಯುಷ್) ಇತ್ತೀಚಿಗೆ ‘ಕಾರ್ಯಾಲಯ್ ಜ್ಯೋತಿ ಸ್ಮೃತಿ ಚಿನ್ಹ ಪುರಸ್ಕಾರ್’ ಮತ್ತು ಕಾರ್ಯಾಲಯ್ ದೀಪ ಸ್ಮೃತಿ ಚಿನ್ಹ ಪುರಸ್ಕಾರ್’ ಪ್ರಶಸ್ತಿಗೆ ಭಾಜನವಾಗಿದೆ. ಸಂಸ್ಥೆಯಲ್ಲಿ ಹಿಂದಿ ಭಾಷೆಗೆ ಸಂಬಂಧಪಟ್ಟಂತೆ ಅತ್ಯುತ್ತಮ ಮಾಹಿತಿ ಪ್ರಸರಣ ಮತ್ತು ಪ್ರಕಟಣೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ರಾಜ್‍ಭಾಷಾ ಸಂಸ್ಥಾನ್ ವತಿಯಿಂದ ಉತ್ತರಾಖಂಡದಲ್ಲಿನ ನೈನಿತಾಲ್ ಜಿಲ್ಲೆಯಲ್ಲಿರುವ ಜಿಮ್ ಕಾರ್ಬೆಟ್ ಪಾರ್ಕ್‍ನಲ್ಲಿ ನಡೆದ ‘ಅಧಿಕೃತ ಬಾಷೆ ಹಿಂದಿ, ಇಂದಿನ ಬದಲಾದ ಕಾಲಘಟ್ಟದಲ್ಲಿ’ ಎಂಬ ವಿಚಾರದ ಮೇಲೆ 81ನೇ ವಿಚಾರಸಂಕಿರಣ-ಕಾರ್ಯಾಗಾರದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಸಹಾಯಕ ಕುಲಸಚಿವ ಕೆ. ಪುರುಷೋತ್ತಮ್, ಆರ್. ಚೇತನ್ ಉಪಸ್ಥಿತರಿದ್ದರು.

ಚಿತ್ರದಲ್ಲಿ: ಹಿಂದಿ ಅನುವಾದಕಿ ಡಾ.ಎಸ್‍.ಆರ್. ಸಾವಿತ್ರಿ, ಡಾ.ಎಚ್‍.ಪಿ. ಉಮಾ ಸರಸ್ವತಿ, ಸಹಾಯಕ ಕುಲಸಚಿವ ಕೆ. ಪುರುಷೋತ್ತಮ್ ಮತ್ತು ಆರ್‍.ಚೇತನ್ ಇದ್ದಾರೆ.

Leave a Reply

comments

Related Articles

error: