ಮೈಸೂರು

ಆಶ್ರಯ ಫಲಾನುಭವಿಗಳ ಹಕ್ಕಿಗಾಗಿ ಪಾದಯಾತ್ರೆ

ಆಶ್ರಯ ಫಲಾನುಭವಿಗಳ ಹಕ್ಕಿಗಾಗಿ ಮಾಜಿ ಸಚಿವ ಎಸ್. ಎ ರಾಮದಾಸ್ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಮೈಸೂರಿನ ಅಗ್ರಹಾರದಿಂದ ಮೈಸೂರು ಪಾಲಿಕೆಯವರೆಗೂ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.

ಮಹರಾಜ ಕಾಲೇಜಿನ ಮುಂದೆ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಸ್‍.ಎ. ರಾಮದಾಸ್, 2800 ಮಂದಿಗೆ ಆಶ್ರಯ ಯೋಜನೆಯಲ್ಲಿ ಮನೆ ವಿತರಿಸಲಾಗಿದ್ದು, ಈಗ ಫಲಾನುಭವಿಗಳಿಂದ ಮನೆಗಳನ್ನು ವಾಪಸ್ ಪಡೆಯುವುದಾಗಿ ಶಾಸಕರು ಹೇಳಿದ್ದಾರೆ. ಮಹಾನಗರ ಪಾಲಿಕೆ ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ಆಶ್ರಯ ಫಲಾನುಭವಿಗಳಿಗೆ ನ್ಯಾಯ ಕೊಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

ಕೆ.ಆರ್. ಕ್ಷೇತ್ರದ ನಗರ ಬಿಜೆಪಿ ಅಧ್ಯಕ್ಷ ಬಿ.ವಿ. ಮಂಜುನಾಥ್, ಯುವ ಮುಖಂಡ ಜೋಗಿ ಮಂಜು ಸೇರಿದಂತೆ ನೂರಾರು ಫಲಾನುಭವಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದರು.

Leave a Reply

comments

Related Articles

error: