ಸುದ್ದಿ ಸಂಕ್ಷಿಪ್ತ

ಪತ್ತೆಗೆ ಮನವಿ

ರಾಜ್ಯ(ಮಡಿಕೇರಿ)ಅ.30:- ಸೋಮವಾರಪೇಟೆಯ ಹುದುಗೂರು ಗ್ರಾಮದ ಮಹಿಳೆಯೋರ್ವರು ನೆರೆಯ ಅರಕಲಗೂಡು ಪಟ್ಟಣದಲ್ಲಿ ನಾಪತ್ತೆಯಾಗಿರುವ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹುದುಗೂರು ಗ್ರಾಮದ ನಿವಾಸಿ ಲಕ್ಕಯ್ಯ ಎಂಬವರ ಪತ್ನಿ ಸಾಕಮ್ಮ(55) ಎಂಬವರು ಅನಾರೋಗ್ಯ ನಿಮಿತ್ತ ಚಿಕಿತ್ಸೆ ಪಡೆಯಲೆಂದು ಅರಕಲಗೂಡಿಗೆ ತೆರಳಿದ್ದು, ಅಲ್ಲಿ ತನ್ನ ಸಹೋದರ ಬೈಚನಳ್ಳಿಯ ಪಾಪಯ್ಯ ಅವರ ಮನೆಯಲ್ಲಿ ಉಳಿದುಕೊಂಡಿದ್ದರು. ಕಳೆದ ತಾ. 12.10.2017ರಂದು ರಾತ್ರಿ ಮನೆಯಲ್ಲಿ ಮಲಗಿದ್ದ ಸಾಕಮ್ಮ ಅವರು ಬೆಳಿಗ್ಗೆ ವೇಳೆಗೆ ನಾಪತ್ತೆಯಾಗಿದ್ದು, ಈ ಬಗ್ಗೆ ಅರಕಲಗೂಡು ಠಾಣೆಯಲ್ಲಿ ದೂರು ದಾಖಲಾಗಿದೆ. ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಬಲ್ಲವರಾಗಿರುವ ಸಾಕಮ್ಮ ಅವರ ಬಗ್ಗೆ ಮಾಹಿತಿಯಿದ್ದಲ್ಲಿ ಪೊಲೀಸ್ ಠಾಣೆ ದೂ: 08175 220249, ಮೊ:9972117487 ಸಂಖ್ಯೆಗೆ ಮಾಹಿತಿ ನೀಡುವಂತೆ ಇಲಾಖಾ ಪ್ರಕಟಣೆ ತಿಳಿಸಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: