ಮೈಸೂರು

ಟೇಬಲ್ ಟೆನ್ನಿಸ್ ಪಂದ್ಯಾವಳಿ ನ.10ರಿಂದ

ಮೈಸೂರು ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಸಂಸ್ಥೆಯು ನ.10 ರಿಂದ 13 ರವರೆಗೆ ರಾಜ್ಯ ರಾಂಕಿಂಗ್ ಟೇಬಲ್ ಟೆನ್ನಿಸ್ ಪಂದ್ಯಾವಳಿ- ಕೆನರಾ ಬ್ಯಾಂಕ್ ಕಪ್ ಅನ್ನು ಆಯೋಜಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಸುನಿಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದು 10ನೇ ವರ್ಷದ ಟೂರ್ನಮೆಂಟ್  ಆಗಿದ್ದು, ಈ ಪಂದ್ಯಾವಳಿಯನ್ನು ಕೆನರಾ ಬ್ಯಾಂಕ್, ಪ್ರೀತಿಲಿಯ ಮತ್ತು ಪ್ರೀತೀಲಿಯ ಮೈಸೂರು ಹಾಗೂ ವಿ-ಟೆಕ್ ಇಂಜಿನಿಯರಿಂಗ್ ಪ್ರೈ.ಲಿ.ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ನಡೆಸಲಾಗುತ್ತಿದೆ. ಮೈಸೂರು ವಿಶ್ವವಿದ್ಯಾನಿಲಯದ ಜಿಮ್ನಾಷಿಯಂ ಹಾಲ್ (ಮಹಾರಾಜ ಕಾಲೇಜು ಮೈದಾನ) ನಲ್ಲಿ ನಡೆಯಲಿರುವ 4 ದಿನಗಳ ಈ ಪಂದ್ಯಾವಳಿಯಲ್ಲಿ ಸುಮಾರು 200 ಕ್ಕೂ ಹೆಚ್ಚು ಕರ್ನಾಟಕ ರಾಜ್ಯ ಆಟಗಾರರು 450 ಈವೆಂಟ್ಸ್‍ಗಳಲ್ಲಿ ಭಾಗವಹಿಸಲಿದ್ದಾರೆ. ಪಂದ್ಯಾವಳಿಯು ಹಲವಾರು ವಯೋ ವರ್ಗಗಳಲ್ಲಿ ನಡೆಯಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಘವೇಂದ್ರ, ಪಂದ್ಯಾವಳಿಯ ತೀರ್ಪುಗಾರ ಟಿ.ಜಿ.ಉಪಾಧ್ಯಾಯ ಮತ್ತು ಕೆ.ಆರ್. ಮಂಜುನಾಥ್ ಉಪಸ್ಥಿತರಿದ್ದರು.

Leave a Reply

comments

Related Articles

error: