ಮೈಸೂರು

ಪ್ರಧಾನಿ ಮೋದಿ ನಿಲುವಿಗೆ ಬೆಂಬಲ: ಸಿಹಿ ಹಂಚಿ ಸಂಭ್ರಮಾಚರಣೆ

ಮಂಗಳವಾರ ಮಧ್ಯರಾತ್ರಿಯಿಂದ 500, 1000ರೂ. ನೋಟುಗಳಿಗೆ ಬೆಲೆಯಿರುವುದಿಲ್ಲ. ಅವು ಕೇವಲ ಕಾಗದದ ತುಂಡುಗಳು ಮಾತ್ರ ಎನ್ನುವ ಮೂಲಕ ಭ್ರಷ್ಟಾಚಾರ, ಕಪ್ಪುಹಣ, ಖೋಟಾನೋಟು, ಭಯೋತ್ಪಾದನಾ ತಡೆಗೆ ಅಚ್ಚರಿಯ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರದ ನಿಲುವನ್ನು ಬೆಂಬಲಿಸಿ ಮೈಸೂರು ಯುವ ಮೋರ್ಚಾ ಮತ್ತು ಮಹಿಳಾ ಮೋರ್ಚಾ ಕಾರ್ಯಕರ್ತರು ಸಿಹಿಹಂಚುವ ಮೂಲಕ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.

ಬುಧವಾರ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇಗುಲದ ಬಳಿ ಜಮಾಯಿಸಿದ ಮೈಸೂರು ಬಿಜೆಪಿ ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ಕಾರ್ಯಕರ್ತರು ನುಡಿದಂತೆ ನಡೆದ ಮೋದಿಯವರಿಗೆ ಜಯವಾಗಲಿ, ಬಡವರು, ರೈತರ ಉಳಿವಿಗಾಗಿ ಕ್ರಾಂತಿಕಾರಿ ನಿರ್ಧಾರ ಕೈಗೊಂಡ ಹಾಗೂ ಕಪ್ಪುಹಣ, ಭಯೋತ್ಪಾದನೆ ತಡೆಗಟ್ಟಲು ದಿಟ್ಟ ಹೆಜ್ಜೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಜಯವಾಗಲಿ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ನಿಲುವನ್ನು ಬೆಂಬಲಿಸಿದರು. ಮೋದಿಯವರ ಪರ ಘೋಷಣೆಗಳನ್ನು ಕೂಗಿದರು. 500, 1000ರೂ ನೋಟುಗಳನ್ನು ರದ್ದುಗೊಳಿಸಿರುವ ಕ್ರಮಕ್ಕೆ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭ ಮೈಸೂರು ಮಹಿಳಾ ಮೋರ್ಚಾ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜು, ಲೀಲಾ ಶೆಣೈ, ಸಿ.ಕಮಲಮ್ಮ, ವಿಜಯ, ಯುವ ಮೋರ್ಚಾ ಅಧ್ಯಕ್ಷ ಗೋಕುಲ್ ಗೌಡ, ನಿಶಾಂತ್ ಸೇರಿದಂತೆ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

comments

Related Articles

error: