ಮೈಸೂರು

ವಿವಿಧ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡವರಿಗೆ ಪೊಲೀಸರಿಂದ ಬುದ್ಧಿಮಾತು

ಮೈಸೂರು,ಅ.31:- ವಿದ್ಯಾರಣ್ಯಪುರಂ ಠಾಣೆಯ ಸರಹದ್ದಿನಲ್ಲಿ ಕೆ.ಆರ್.ಡಿವಿಜನ್  ಐದು ಠಾಣೆಗಳನ್ನೊಳಗೊಂಡ  ವಿವಿಧ ಅಪರಾಧ  ಕೃತ್ಯಗಳಲ್ಲಿ ತೊಡಗಿಸಿಕೊಂಡವರನ್ನು   ಕರೆದು ಬುದ್ಧಿ ಹೇಳಲಾಯಿತು.

ಕೆ .ಆರ್.ಎಸಿಪಿ ಧರ್ಮಪ್ಪ ಮತ್ತು ಇನ್ಸಪೆಕ್ಟರ್ ಓಂಕಾರ, ಸಬ್ ಇನ್ಸಪೆಕ್ಟರ್ ಮೋಹನ್ , ಸರಸ್ವತಿಪುರಂಠಾಣೆಯ ಇನ್ಸಪೆಕ್ಟರ್ ನಾಗೇಗೌಡ ಇವರು ಬೈಕ್ ಕಳ್ಳತನ, ಸರಗಳ್ಳತನ, ಮನೆಗಳ್ಳತನ ಗಳಂತಹ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದು ಜೈಲುವಾಸ ಅನುಭವಿಸಿ ಹೊರಬಂದ ವ್ಯಕ್ತಿಗಳ ಮೇಲೆ ಕಣ್ಣಿರಿಸಿ ಮಾಹಿತಿ ಕಲೆ ಹಾಕಿದ್ದರು. ಅವರನ್ನು ಠಾಣೆಯ ಬಳಿ ಕರೆಯಿಸಿ  ಮನಪರಿವರ್ತನೆಗೆ ಪ್ರಯತ್ನಿಸಿದರಲ್ಲದೇ  ತಿಳುವಳಿಕೆಗಳನ್ನು ಹೇಳಿ ಕಳುಹಿಸಿದರು. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಲು ಪ್ರಯತ್ನಿಸಿ. ನೀವು ಒಳ್ಳೆಯ ವ್ಯಕ್ತಿಗಳಾದಲ್ಲಿ ಸಮಾಜವೂ ಕೂಡ ನಿಮ್ಮನ್ನು ಸ್ವೀಕರಿಸುತ್ತದೆ ಎಂಬಿತ್ಯಾದಿ ಸಲಹೆಗಳನ್ನು ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: