ಮೈಸೂರು

‘ನಾವು ವಿಶೇಷ’ – ವಿಶೇಷ ಮಕ್ಕಳ ಕಾರ್ಯಕ್ರಮ ನ.11ರಂದು

ಕರುಣಾಮಯಿ ಫೌಂಡೇಶನ್ ವತಿಯಿಂದ ವಿಶೇಷ ಮಕ್ಕಳ ತರಬೇತಿ ಶಾಲೆಯಲ್ಲಿ ‘ನಾವು ವಿಶೇಷ’ ಎಂಬ ವಿಶೇಷ ಮಕ್ಕಳ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅ‍ಧ್ಯಕ್ಷ ಜಿ.ಸಿ.ಚಿರಣ್ ಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನ.11 ರಂದು ಬೆಳಗ್ಗೆ 10ಕ್ಕೆ ಜಗನ್ಮೋಹನ ಅರಮನೆಯಲ್ಲಿ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮವನ್ನು ಕರುಣಾಮಯಿ ಫೌಂಡೇಶನ್ ನ ಪೋಷಕ ಬಾಲಾಜಿ ಶ್ರೀನಿವಾಸನ್ ಉದ್ಘಾಟಿಸಲಿದ್ದಾರೆ. ಎನ್.ರಂಗರಾವ್ ಅಂಡ್ ಸನ್ಸ್ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷ ಆರ್.ಗುರು ವಿಶೇಷ ಆಹ್ವಾನಿತರಾಗಿ, ಮುಖ್ಯ ಅತಿಥಿಗಳಾಗಿ  ಕೆಎಸ್‍ಟಿಡಿಸಿ ಪ್ರಧಾನ ವ್ಯವಸ್ಥಾಪಕ ಡಾ.ಎಂ.ಆರ್.ರವಿ, ಸೇಫ್ ವೀಲ್ಸ್ ಸಮೂಹ ಸಂಸ್ಥೆಯ ಮಾಲೀಕ ಪ್ರಶಾಂತ್ ಬಿ.ಎಸ್., ಮೈಸೂರು ರೇಸ್ ಕ್ಲಬ್ ನ ಅಧ್ಯಕ್ಷ ಹನುಮಾನ್ ಪ್ರಸಾದ್ ಉಪಸ್ಥಿತರಿರುತ್ತಾರೆ. ಸಂಜೆ 4.30 ಕ್ಕೆ ಸಮಾರೋಪ ಸಮಾರಂಭವಿರುತ್ತದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ವಿ.ಸೌಮ್ಯ, ಶಾಲೆಯ ಮುಖ್ಯೋಪಾಧ‍್ಯಾಯಿನಿ ನಿತ್ಯ, ಶಿಕ್ಷಕ ವಿವೇಕ್ ಹಾಜರಿದ್ದರು.

Leave a Reply

comments

Related Articles

error: