ಕರ್ನಾಟಕ

ವಿಕಲ ಚೇತನರಿಗಾಗಿ ಬದಲಾದ ವೇಳಾಪಟ್ಟಿ ವೆಬ್‍ಸೈಟ್‍ನಲ್ಲಿ ಪ್ರಕಟ

ಬೆಂಗಳೂರು (ಅ.31): ಕರ್ನಾಟಕ ಲೋಕಸೇವಾ ಆಯೋಗವು 2015 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆಯನ್ನು ಈ ಸಾಲಿನ ಡಿ.16 ರಿಂದ ಡಿ.23 ರವರೆಗೆ ನಡೆಸಲಿದ್ದು, ಪರೀಕ್ಷೆ ಬರೆಯಲು ಹೆಚ್ಚುವರಿ ಕಾಲಾವಕಾಶ ಪಡೆಯಲು ಅರ್ಹರಿರುವ ಅಂಧ, ದೃಷ್ಟಿಮಾಂದ್ಯ, ಬರವಣಿಗೆ ಕುಂಠಿತಗೊಂಡಿರುವ ಚಲನವನವೈಕಲ್ಯ, ಮೆದುಳಿನ ಪಾರ್ಶ್ವವಾಯು ಹೊಂದಿರುವ ಅಭ್ಯರ್ಥಿಗಳ ಕೋರಿಕೆಯಂತೆ ಆಯೋಗವು ಈ ಹಿಂದೆ ಪ್ರಕಟಿಸಿದ್ದ ವೇಳೆಯನ್ನು ಪರಿಷ್ಕರಿಸಿ ಬದಲಾದ ವೇಳೆಯ ವಿವರವಾದ ವೇಳಾಪಟ್ಟಿಯನ್ನು ಆಯೋಗ ವೆಬ್‍ಸೈಟ್ http://kpsc.kar.nic.in/Timetable ಈ ವಿಳಾಸದಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗ ತಿಳಿಸಿದೆ.

(ಎನ್‍ಬಿಎನ್‍)

Leave a Reply

comments

Related Articles

error: