ಮೈಸೂರು

ಕರಾಟೆ ತರಬೇತುದಾರರಿಂದ ಅರ್ಜಿ ಆಹ್ವಾನ

ಮೈಸೂರು (ಅ.31): ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ, ಸಾರ್ವಜನಿಕ ಶಿಕ್ಷಣ ಇಲಾಖೆ 2017-18ನೇ ಸಾಲಿನ ಮೈಸೂರು ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳ “ಸ್ವಯಂ ರಕ್ಷಣಾ ಕೌಶಲ್ಯ” ನೀಡುವ ಸಂಬಂಧ ಕರಾಟೆ ತರಬೇತುದಾರರಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತ ತರಬೇತುದಾರರು ಭಾವಚಿತ್ರ ಹೊಂದಿರುವ ಸರ್ಕಾರದ ಅಧಿಕೃತ ಗುರುತಿನ ಚೀಟಿಯ ಮನವಿಯೊಂದಿಗೆ ನವೆಂಬರ್ 11ರೊಳಗೆ ಸಂಬಂಧಿಸಿದ ಶಾಲಾ ಮುಖ್ಯಶಿಕ್ಷಕರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಡಿ ಸುಬ್ಬಯ್ಯ ರಸ್ತೆ, ಮೈಸೂರು ಜಿಲ್ಲೆ-570024 ಅಥವಾ ದೂರವಾಣಿ ಸಂಖ್ಯೆ 9480886946 ಅನ್ನು ಸಂಪರ್ಕಿಸಬಹುದು.

(ಎನ್‍ಬಿಎನ್‍)

Leave a Reply

comments

Related Articles

error: