ಪ್ರಮುಖ ಸುದ್ದಿಮೈಸೂರು

500 ಮತ್ತು 1000 ರು. ರದ್ದು ಹಿನ್ನೆಲೆ: ಮೈಸೂರು ಮೃಗಾಲಯಕ್ಕೆ ಬೀಗ

mysore-zoo-1ದೇಶದಲ್ಲಿ ಕಪ್ಪುಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಐತಿಹಾಸಿಕ ನಡೆ ಇಟ್ಟಿರುವ ಮೋದಿ ಸರಕಾರ, ಮಂಗಳವಾರ ಮಧ್ಯಾರಾತ್ರಿಯಿಂದಲೇ 500 ಹಾಗೂ 1000  ರು. ನೋಟುಗಳ ಚಲಾವಣೆಯನ್ನು ನಿಷೇಧಿಸಿತ್ತು, ಇದರ ಹೊಡೆತ ಎಲ್ಲ ಕ್ಷೇತ್ರದ ಮೇಲೂ ಆಗುತ್ತಿದೆ. ಮೈಸೂರಿನ ಮೃಗಾಲಯದ ಮೇಲೂ ಈ ಹೊಡೆತ ಬಿದ್ದಿದೆ.

ಮೈಸೂರು ಮೃಗಾಲಯ ವೀಕ್ಷಿಸಲು ಬೆಳಗ್ಗೆಯಿಂದ ನೂರಾರು ಮಂದಿ ಆಗಮಿಸಿದ್ದು, ಎಲ್ಲರೂ ಸಾವಿರ, ಐನೂರು ರು. ನೀಡಿ ಟಿಕೆಟ್‍ ಕೇಳುತ್ತಿದ್ದಾರೆ. ಇಂದಿನಿಂದ 500, 1000 ರು. ಚಲಾವಣೆಯಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಬ್ಯಾಂಕ್‍ ಜೊತೆ ಮಾತುಕತೆ ನಡೆಸಿ ಬುಧವಾರ ಮೈಸೂರು ಮೃಗಾಲಯ ಮುಚ್ಚಲು ನಿರ್ಧರಿಸಿದ್ದೇವೆ ಎಂದು ಮೃಗಾಲಯ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ಕಮಲಾ ಕರಿಕಾಳನ್ ‘ಸಿಟಿಟುಡೆ’ಗೆ ತಿಳಿಸಿದ್ದಾರೆ.

ಮೈಸೂರು ಮೃಗಾಲಯ ವೀಕ್ಷಿಸಲು ಮದ್ದೂರಿನಿಂದ ಆಗಮಿಸಿದ ಮಂಜುನಾಥ್ ಮಾತನಾಡಿ, ಮಕ್ಕಳಿಗೆ ಮೃಗಾಲಯ ತೋರಿಸಲು ಕರೆದುಕೊಂಡು ಬಂದಿದ್ದೆ. ಆದರೆ, ಈಗ ಮೃಗಾಲಯ ಮುಚ್ಚಲಾಗಿದೆ. ವಸ್ತುಪ್ರದರ್ಶನ ಮಳಿಗೆ ಸಂಜೆ ಬಳಿಕ ತೆರೆಯುವುದರಿಂದ ವಾಪಸ್ ಊರಿಗೆ ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.

ಬೆಳಗ್ಗೆ ಸುಮಾರು ನೂರು ಮಂದಿಗೆ ಟಿಕೆಟ್ ನೀಡಿ ಒಳ ಬಿಡಲಾಗಿತ್ತು. ಈಗ ಅವರನ್ನು ಹೊರಗೆ ಕಳುಹಿಸಿ ಮೃಗಾಲಯವನ್ನು ಮುಚ್ಚಲಾಗಿದೆ. ಮೃಗಾಲಯ ವೀಕ್ಷಣೆಗೆ ಆಗಮಿಸಿದ ಪ್ರವಾಸಿಗರು ವಾಪಸ್ ತೆರಳುತ್ತಿದ್ದಾರೆ.

zoo-3

 

Leave a Reply

comments

Related Articles

error: