ಮೈಸೂರು

ರಮ್ಯಕವಿ ದೊಡ್ಡರಂಗೇಗೌಡ ಅವರ ‘ಕಾವ್ಯ ಗೀತೋತ್ಸವ – ಅಭಿನಂದನಾ ಸಮಾರಂಭ’

ಜನಚೇತನ ಟ್ರಸ್ಟ್ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ರಾಜ್ಯ ಒಕ್ಕಲಿಗರ ಸಂಘ, ಲಯನ್ಸ್ ಕ್ಲಬ್ ಆಫ್ ಮೈಸೂರು ಪ್ಯಾಲೇಸ್ ಸಿಟಿ ಮತ್ತು ಗ್ರಾಮೀಣ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಕನ್ನಡದ ಖ‍್ಯಾತ ರಮ್ಯ ಕವಿ ಡಾ.ದೊಡ್ಡರಂಗೇಗೌಡರ 70ನೇ ಜನ್ಮದಿನಾಚರಣೆಯ ಸಲುವಾಗಿ ‘ಡಾ. ದೊಡ್ಡರಂಗೇಗೌಡ ರಚಿತ ಕಾವ್ಯ- ಗೀತೋತ್ಸವ ಹಾಗೂ ಅಭಿನಂದನಾ ಸಮಾರಂಭ’ವನ್ನು ಏರ್ಪಡಿಸಲಾಗಿದೆ ಎಂದು ಅಧ‍್ಯಕ್ಷ ಪ್ರಸನ್ನ ಎನ್. ಗೌಡ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನ.11 ರ ಸಂಜೆ 5 ಗಂಟೆಗೆ ಕಲಾಮಂದಿರದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮಂಡ್ಯದ ಹೆಸರಾಂತ ಕವಿ ಡಾ. ಪ್ರದೀಪ್ ಕುಮಾರ್ ಹೆಬ್ರಿ ಉದ್ಘಾಟಿಸಲಿದ್ದಾರೆ. ಖ್ಯಾತ ವಿಮರ್ಶಕ ಡಾ. ಸಿ. ನಾಗಣ್ಣ ಅವರು ಅಧ‍್ಯಕ್ಷತೆ ವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಲೇಖಕಿ ಚಂಪಾ ಶಿವಣ್ಣ ಅವರ ಸಂಪಾದಕತ್ವದಲ್ಲಿ ಹೊರತರುವ ‘ಹಳ್ಳಿಹೈದ’ ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಲಾಗುವುದು. ಕಾರ್ಯಕ್ರಮಕ್ಕೆ ಉಚಿತ ಪಾಸ್ ವ್ಯವಸ್ಥೆ ಮಾಡಲಾಗಿದ್ದು, ಮೊದಲು ಬಂದವರಿಗೆ ಆದ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೇವರಾಜು 91648 37773 ಗೆ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ವೈ.ಡಿ. ರಾಜಣ್ಣ, ಸಂಪಾದಕಿ ಹಾಗೂ ಕವಯಿತ್ರಿ ಚಂಪಾವತಿ ಶಿವ‍ಣ್ಣ,  ಲಯನ್ಸ್ ಕ್ಲಬ್ ಆಫ್ ಮೈಸೂರು ಪ್ಯಾಲೇಸ್ ಸಿಟಿಯ ಅಧ್ಯಕ್ಷ ಎಸ್. ನಾಗೇಶ್ ಮೂರ್ತಿ, ಜನಚೇತನ ಟ್ರಸ್ಟ್ ನ ಆಶಾ ಶಂಕರೇಗೌಡ ಹಾಜರಿದ್ದರು.

Leave a Reply

comments

Related Articles

error: