ಲೈಫ್ & ಸ್ಟೈಲ್

ನಿಶ್ಯಕ್ತಿ ಓಡಿಸಲು ಪೌಷ್ಠಿಕ ಜ್ಯೂಸ್

ನಾವೆಲ್ಲಾದರೂ ಹೊರಗಡೆ ಹೋಗಿ ಬಂದಾಗ ಅಥವಾ ಹೆಚ್ಚು ಕೆಲಸ ಮಾಡಿದಾಗ ನಮ್ಮ ಶರೀರದಲ್ಲಿ ನಿಶ್ಯಕ್ತಿ ಕಾಣಿಸಿಕೊಳ್ಳುತ್ತದೆ. ಅಂತಹ ಸಮಯದಲ್ಲಿ ಒಂದು ಗ್ಲಾಸ್ ಪೌಷ್ಠಿಕ ಜ್ಯೂಸ್ ಕುಡಿಯುವುದರಿಂದ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಶಕ್ತಿಯನ್ನು ಪಡೆಯಲು ದೇಹಕ್ಕೆ ಹೆಚ್ಚಿನ ಪೌಷ್ಠಿಕಾಂಶದ ಅವಶ್ಯಕತೆ ಇದೆ. ವಿಶ್ವದಲ್ಲಿ ಶೇಖಡಾ 70 ರಷ್ಟು ಜನರು ಪೌಷ್ಠಿಕಾಂಶಗಳನ್ನು ಹೊಂದಿದ ಜ್ಯೂಸ್ ಕುಡಿಯಲು ಇಷ್ಟಪಡುತ್ತಾರೆ. ಈ ಜ್ಯೂಸ್ ಕುಡಿಯುವುದರಿಂದ ಶರೀರದಲ್ಲಿನ ಬೊಜ್ಜು ಕರಗಿ ಸುಂದರತೆ ಹೆಚ್ಚುತ್ತದೆ. ನಿಶ್ಯಕ್ತಿಯೂ ಮಾಯವಾಗುತ್ತದೆ.

ಬೇಕಾಗುವ ಸಾಮಾಗ್ರಿಗಳು: 1-ಬಾಳೆಹಣ್ಣು, 1/2ಸೇಬು, 1/2ಸಪೋಟಾ, 4-ಗೋಡಂಬಿ, 4-ಬಾದಾಮಿ, 1/2 ಗ್ಲಾಸ್ ಹಾಲು, 1 ಚಮಚ ಸಕ್ಕರೆ, 2 ಪುದಿನಾ ಎಲೆ.

ಮಾಡುವ ವಿಧಾನ: ಮೇಲೆ ತಿಳಿಸಿರುವ ಎಲ್ಲ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ 2 ನಿಮಿಷ ರುಬ್ಬಿಕೊಳ್ಳಿ. ಬಳಿಕ ಅದನ್ನು ಗ್ಲಾಸ್ ಗೆ ಬಗ್ಗಿಸಿ, ಈಗ ಪೌಷ್ಠಿಕಾಂಶವುಳ್ಳ ಜ್ಯೂಸ್ ನ್ನು ಸೇವಿಸಿ, ಆರೋಗ್ಯವಂತರಾಗಿ ಬಾಳಿ.

Leave a Reply

comments

Related Articles

error: