ಮೈಸೂರು

ನ.12ರಂದು ಡಿಎಸ್ಎಸ್ ಬೃಹತ್ ಸಮಾವೇಶ

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮತ್ತು ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 125 ನೇ  ಜನ್ಮದಿನದ ‘ವಿಶ್ವ ಜ್ಞಾನ ದಿನ’ ದ ಅರ್ಥಪೂರ್ಣತೆಗಾಗಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪದಾಧಿಕಾರಿ ರಾಜ‍ಣ್ಣ ಇಟ್ನ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸಮಾವೇಶದ ಉದ್ಘಾಟನಾ ಕಾರ್ಯಕ್ರಮವನ್ನು ನ.12 ರ ಬೆಳಗ್ಗೆ 11.30 ಕ್ಕೆ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಏರ್ಪಡಿಸಲಾಗಿದೆ. ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಮಲ್ಲೇಶ ಚುಂಚನಹಳ್ಳಿ, ಶ್ರೀನಿವಾಸ, ಚಂದ್ರಶೇಖರ್, ಹನುಮಂತು ಮತ್ತು ನಾಗರಾಜು ಹಾಜರಿದ್ದರು.

Leave a Reply

comments

Related Articles

error: