ಸುದ್ದಿ ಸಂಕ್ಷಿಪ್ತ

ವಿವಿದೆಡೆ ಕನ್ನಡ ರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ

ಮೈಸೂರು, ಅ. 31 :

ರಾಮಕೃಷ್ಣ ವಿದ್ಯಾಕೇಂದ್ರ ಹಾಗೂ ಆರ್.ಕೆ.ವಿ.ಕೆ. ಸಂಯುಕ್ತ ಪದವಿಪೂರ್ವ ಕಾಲೇಜು ಸಂಯುಕ್ತವಾಗಿ 69ನೇ ಕನ್ನಡ ರಾಜ್ಯೋತ್ಸವ ವನ್ನು ನ.1ರ ಬೆಳಗ್ಗೆ 9.30ಕ್ಕೆ ಶಾಲೆಯ ಶಾರದಾ ಸಭಾಂಗಣದಲ್ಲಿ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಚಾಮರಾಜನಗರದ ಜೆ.ಎಸ್.ಎಸ್ ಮಹಿಳಾ ಕಾಲೇಜಿನ ಡಾ.ಎನ್.ಮಹೇಶ್ವರಿ ಭಾಗವಹಿಸುವರು, ವಿದ್ಯಾಕೇಂದ್ರದ ಅಧ್ಯಕ್ಷ ಎಂ.ಪಾಪೇಗೌಡ ಅಧ್ಯಕ್ಷತೆ ವಹಿಸುವರು.

ತರಳು ಬಾಳು ಶಿಕ್ಷಣ ಕೇಂದ್ರ : ತೊಣಚಿಕೊಪ್ಪಲಿನ ತರಳಬಾಳು ಶಿಕ್ಷಣ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವವನ್ನು ನ.1ರ ಬೆಳಗ್ಗೆ 8.30ಕ್ಕೆ, ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ.

ವಿಶ್ರಾಂತ ಪ್ರಾಚಾರ್ಯ ಪ್ರೊ.ಕೆ.ಬಿ.ಪರಶಿವಪ್ಪ ಉದ್ಘಾಟಿಸುವರು, ಮುಖ್ಯ ಅತಿಥಿಯಾಗಿ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕಿ ಡಾ.ಹೆಚ್.ಪಿ.ದೇವಕಿ ಭಾಗವಹಿಸುವರು, ಪ್ರಾಂಶುಪಾಲ ಎಸ್.ಶಿವಕುಮಾರ್ ಅಧ್ಯಕ್ಷತೆ ವಹಿಸುವರು.

ಕರ್ನಾಟಕ ಕನ್ನಡ ವೇದಿಕೆ : 69ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ನ.1ರ ಬೆಳಗ್ಗೆ 11.30ಕ್ಕೆ ಅಗ್ರಹಾರದ 101ನೇ ಗಣಪತಿ ದೇವಸ್ಥಾನದಲ್ಲಿ ಆಯೋಜಿಸಿದೆ.

ಪತ್ರಿಕೋದ್ಯಮಿ ರಾಜಶೇಖರ ಕೋಟಿ ದ್ವಜಾರೋಹಣ ನೆರವೇರಿಸುವರು, ಉಪ ಪೊಲೀಸ್ ಆಯುಕ್ತ ವಿಷ್ಣುವರ್ಧನ್ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ನ್ಯಾಯವಾದಿ ಡಾ.ಆರ್.ಡಿ.ಕುಮಾರ್ ಮೊದಲಾದವರು ಭಾಗಿಯಾಗುವರು.  (ಕೆ.ಎಂ.ಆರ್)

Leave a Reply

comments

Related Articles

error: