ಕರ್ನಾಟಕ

ಗಂಟಲಲ್ಲಿ ಚಕ್ಕುಲಿ ಸಿಲುಕಿ ಮಗು ಸಾವು : ಪೋಷಕರೇ ಎಚ್ಚರ ವಹಿಸಿ!

ಬೆಳ್ತಂಗಡಿ (ಅ.31): ಮಗುವಿಗೆ ತಿನ್ನಲು ಕೊಟ್ಟ ಚಕ್ಕುಲಿ ತುಂಡು ಆ ಮಗುವಿನ ಜೀವವನ್ನೇ ಬಲಿ ಪಡೆದ ಘಟನೆ ಇಂದು ದಕ್ಷಿಣ ಕನ್ನಡ ಜಿಲ್ಲೆಯಿಂದ ವರದಿಯಾಗಿದೆ.

ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ತಿನ್ನಲೆಂದು ಬಾಯಿಗೆ ಹಾಕಿಕೊಂಡ ಚಕ್ಕುಲಿ ತುಂಡೊಂದು ಗಂಟಲಲ್ಲಿ ಸಿಲುಕಿದ ಪರಿಣಾಮ ಮಗುವೊಂದು ಮೃತಪಟ್ಟ ಘಟನೆ ಇಂದು ನಡೆದಿದೆ. ಇಲ್ಲಿನ ವಿಠಲ ಎಂಬವರ ಒಂದು ವರ್ಷದ ಆರುಷ್ ಮೃತಪಟ್ಟ ಮಗು.  ಚಕ್ಕುಲಿಯ ತುಂಡನ್ನು ಮಗುವಿಗೆ ನೀಡಿದ್ದರು ಎನ್ನಲಾಗಿದ್ದು, ಬಾಯಿಗೆ ಹಾಕಿಕೊಂಡ ಮಗು ಅದನ್ನು ನುಂಗಲಾಗದೆ ಗಂಟಲಲ್ಲಿ ಸಿಲುಕಿಕೊಂಡ ಪರಿಣಾಮ ಉಸಿರುಕಟ್ಟಿ ಮಗು ಮೃತಪಟ್ಟಿದೆ ಎಂದು ಹೇಳಲಾಗಿದೆ.

(ಎನ್‍ಬಿಎನ್‍)

Leave a Reply

comments

Related Articles

error: