ದೇಶಪ್ರಮುಖ ಸುದ್ದಿವಿದೇಶ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾರೆ. ವಿಶ್ವಾದ್ಯಂತ ಕುತೂಹಲದ ಕೇಂದ್ರಬಿಂದುವಾದ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಅವರನ್ನು ಸೋಲಿಸಿ ಟ್ರಂಪ್ ಗೆಲುವಿನ ನಗೆ ಬೀರಿದ್ದರೆ ಗೆದ್ದೇಗೆಲ್ಲುವ ವಿಶ್ವಾಸದಿಂದ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆ ಪ್ರಚಾರ ನಡೆಸಿದ್ದ ಹಿಲರಿ ಕ್ಲಿಂಟನ್ ಅವರು ಟ್ರಂಪ್ ತಂತ್ರಗಾರಿಕೆ ಮುಂದೆ ಸೋತಿದ್ದಾರೆ.

ಭಾರತಕ್ಕೆ ಹೊರಗುತ್ತಿಗೆ ನೀಡುತ್ತಿರುವುದರಿಂದ ಅಮೆರಿಕನ್ನರ ಉದ್ಯೋಗದ ಮೇಲಾಗುತ್ತಿರುವ ಪರಿಣಾಮಗಳು, ಮತದಾರರ ಹಣಕಾಸು ಮುಗ್ಗಟ್ಟು, ಜನಾಂಗೀಯ ವೈಮನಸ್ಸು ಕುರಿತ ಅಮೆರಿಕನ್ನರ ಭಾವನೆಗಳ ಲಾಭ ಪಡೆದ ಟ್ರಂಪ್, ತಮ್ಮ ವಿರುದ್ಧ ಕೇಳಿ ಬಂದ ಲೈಂಗಿಕ ಕಿರುಕುಳದ ದೂರುಗಳನ್ನು ಬದಿಗೆ ಸರಿಸಿ ಶ್ವೇತಭವನ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

ಟ್ರಂಪ್ ಆಯ್ಕೆ ಇಡೀ ವಿಶ್ವದ ಮೇಲೆ ಪರಿಣಾಮ ಬೀರಲಿದ್ದು, ಕಳೆದ ಎಂಟು ವರ್ಷಗಳ ಒಬಾಮ ಆಡಳಿತದಲ್ಲಿ ಜಾರಿಗೆ ಬಂದಿದ್ದ ಹಲವು ಸುಧಾರಣೆ ಅಥವಾ ಒಪ್ಪಂದಗಳು ಮರು ವಿಮರ್ಶೆಗೆ ಒಳಪಡಲಿವೆ ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ಭಾರತಕ್ಕೆ ಉದ್ಯೋಗಗಳ ಹೊರಗುತ್ತಿಗೆ, ಆರೋಗ್ಯ ಕಾಳಜಿ ಕಾಯ್ದೆ, ಇರಾನ್ ಜೊತೆಗಿನ ಅಣುಶಕ್ತಿ ಒಪ್ಪಂದ, ಮೆಕ್ಸಿಕೊ-ಯುಎಸ್ ವ್ಯಾಪಾರ ಒಪ್ಪಂದಗಳು ಮೊದಲ ಹಂತದಲ್ಲಿ ಮರುಪರಿಶೀಲನೆ ಆಗಬಹುದು.

Leave a Reply

comments

Related Articles

error: