ಕರ್ನಾಟಕ

ಗುಣಮಟ್ಟದ ಸೇವೆ ನೀಡುತ್ತಾ, ನಂಬಿಕೆಯ ಗ್ರಾಹಕರನ್ನು ಪಡೆದಿರುವ ಏಕೈಕ ಸಂಸ್ಥೆ ಐಓಸಿಎಲ್ 

ರಾಜ್ಯ(ಮಡಿಕೇರಿ)ಅ.31:- ಗುಣಮಟ್ಟದ ಸೇವೆ ಮತ್ತು ಮೌಲ್ಯಯುತ ವ್ಯವಸ್ಥೆಗಳಿಗೆ ಹೆಸರಾದದ್ದು ಇಂಡಿಯನ್ ಆಯಿಲ್ ಲಿಮಿಟೆಟ್ ಕಂಪನಿ. ಗ್ರಾಹಕರ ಗೌರವ ಮತ್ತು  ನಂಬಿಕೆಗಳಿಗೆ ಪಾತ್ರವಾದ ಈ ಕಂಪನಿ  ಕರ್ನಾಟಕದಲ್ಲಿ 1875 ಬಂಕ್‍ಗಳನ್ನು ಹೊಂದಿ ಉನ್ನತಮಟ್ಟದ ಸವಲತ್ತುಗಳೊಂದಿಗೆ ಗ್ರಾಹಕರಿಗೆ ಸುಲಭವಾದ ಸೇವೆಯನ್ನು ಸಲ್ಲಿಸುತ್ತಿದೆ ಎಂದು ಐಒಸಿಲ್‍ನ ಜನರಲ್ ಮ್ಯಾನೆಜರ್ ಅಮರೇಂದ್ರಕುಮಾರ್ ಹೇಳಿದರು.

ಕುಶಾಲನಗರದ ಬ್ಲೂಮೂನ್ ಪೆಟ್ರೋಲ್ ಬಂಕ್ ಬಳಿ ಆಯೋಜಿಸಿದ್ದ 5.ಕಿ.ಲೋ ಗ್ಯಾಸ್ ಸಿಲಿಂಡರ್‍ಗಳ ವಿಭಾಗೀಯ ವಿತರಣಾ ಕೇಂದ್ರ ಮತ್ತು ಟಯರ್ ಪಂಕ್ಚರಿಂಗ್ ಹೈಟೆಕ್ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ಜಾರಿಗೆ ತಂದಿರುವ ಪ್ರತಿದಿನವೂ ಪೆಟ್ರೋಲ್, ಡಿಸೇಲ್ ಬೆಲೆಗಳ ವಿಚಾರ ಕಂಪನಿಯ ವಿತರಕರಿಗೂ ಮತ್ತು ಆಡಳಿತ ವ್ಯವಸ್ಥೆಗೂ ತೃಪ್ತಿದಾಯಕವಾಗಿದೆ. ಬೆಲೆಗಳ ಸ್ಥಿರೀಕರಣವಾಗದೆ ಬದಲಾಗುತ್ತಿರಬೇಕು. ಆದರೆ ಮೂಲ ಕಂಪನಿಗಳ ಜೊತೆಯಲ್ಲಿ ವಿತರಕರಿಗೆ ಉತ್ತಮ ಲಾಭಾಂಶವು ಇರಬೇಕು. ಹಾಗೆಯೇ ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ಸೇವೆ ಲಭ್ಯವಾಗಬೇಕು ಎಂದರು.  ಸಮಾರಂಭದಲ್ಲಿ ಮೈಸೂರು ವಿಭಾಗದ ಡಿವಿಜನಲ್ ಮ್ಯಾನೆಜರ್ ರಾಮಕೃಷ್ಣ, ಐಓಸಿಎಲ್ ಅಧಿಕಾರಿಗಳಾದ ಶ್ರೀಧರ್, ಹಿಮಾಂಶು, ಸುಂಟಿಕೊಪ್ಪ ಐಓಸಿಎಲ್ ಗ್ಯಾಸ್ ವಿತರಕರಾದ ಚೈತ್ರ ಭಾರತೀಶ್, ಗದ್ದೆಹಳ್ಳ ಐಓಸಿಎಲ್ ಬಂಕ್ ಮಾಲೀಕ ಕರುಂಬಯ್ಯ ಇದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: