ಕರ್ನಾಟಕಪ್ರಮುಖ ಸುದ್ದಿ

ಸರ್ಕಾರದ ಎರಡು ಮೊಬೈಲ್ ಆ್ಯಪ್‍ಗಳಿಗೆ ಸಿಎಂ ಚಾಲನೆ

ಬೆಂಗಳೂರು (ನ.1): ಮುಖ್ಯಮಂತ್ರಿಗಳು ತಮ್ಮ ಜನಸಂಪರ್ಕ ಕಾರ್ಯಕ್ರಮದ ಮಾಹಿತಿ ಹಾಗೂ ರೈತ ಬೆಳೆ ಸಮೀಕ್ಷೆ ಕುರಿತ ಎರಡು ಮೊಬೈಲ್ ಆ್ಯಪ್‍ಗಳಿಗೆ  ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಚಾಲನೆ ನೀಡಿದರು.

ದಿ ಸಿಟಿಜನ್ ಕನೆಕ್ಟ್ ಆ್ಯಪ್‍ಹೆಸರಿನ ಈ ಜನಸಂಪರ್ಕ ಆ್ಯಪ್‍ಪ್‍ನಲ್ಲಿ ಸರ್ಕಾರದ ಸಾಧನೆ, ಜನರ ಕುಂದುಕೊರತೆಗಳ ಪರಿಹಾರ, ಮುಖ್ಯಮಂತ್ರಿಗಳ ಭಾಷಣ, ವಿಡಿಯೋ ಸಂದರ್ಶನ, ದಿನನಿತ್ಯದ ಕಾರ್ಯಕ್ರಮ, ವರದಿಗಳು ಲಭ್ಯವಿದೆ. ಸಾರ್ವಜನಿಕರು ಮುಖ್ಯಮಂತ್ರಿಗಳು ಈ ಆ್ಯಪ್‍ಪ್ ಮೂಲಕ ನೇರವಾಗಿ ಸಹ ಸಂಪರ್ಕಿಸಬಹುದಾಗಿದೆ. ಸರ್ಕಾರದ ಯೋಜನೆಗಳನ್ನು ಆ್ಯಪ್‍ ಸಮರ್ಪಕವಾಗಿ ತಲುಪಿಸುವ ಹಾಗೂ ಪಾರದರ್ಶಿಕ ಆಡಳಿತ ನೀಡುವ ನಿಟ್ಟಿನಲ್ಲಿ ಈ ಆ್ಯಪ್‍ಪ್ ಸಹಕಾರಿಯಾಗಿದೆ. ಈ ಆ್ಯಪ್‍ಪ್‍ನನ್ನು ಇಂಗ್ಲೀಷ್ ಹಾಗೂ ಕನ್ನಡ ಎರಡರಲ್ಲೂ ಸಿದ್ಧಪಡಿಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಮಾನ್ಯ ಮುಖ್ಯಮಂತ್ರಿಗಳು ಈ ಎರಡು ಆ್ಯಪ್‍ಗಳಿಂದ ಜನಸಾಮಾನ್ಯರಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಜನಸಂಪರ್ಕ ಆ್ಯಪ್‍ನಲ್ಲಿ ಜನರು ಸರ್ಕಾರಕ್ಕೆ ಸಲಹೆ, ಸೂಚನೆಗಳನ್ನು ನೀಡಬಹುದು. ಇದರಿಂದ ಪ್ರಜಾಪ್ರಭುತ್ವದ ಯಶಸ್ಸು ಸಾಧ್ಯ. ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ನವ ಕರ್ನಾಟಕ ನಿರ್ಮಾಣ – 2022 ಕ್ಕೆ ಮುನ್ನುಡಿ ಹಾಕಬಹುದು. ಇದು ಡಿಜಿಟಲ್ ಯುಗವಾಗಿರುವುದರಿಂದ ರೈತರಿಗೆ ಕೃಷಿಗೆ ಸಂಬಂಧಿಸಿದ ಮಾಹಿತಿ ಜನರಿಗೆ ಬೇಗ ತಲುಪುತ್ತದೆ ಎಂದರು.

ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‍ನ ಕುರಿತು ಮಾತನಾಡಿದ ಕೃಷಿ ಸಚಿವರಾದ ಕೃಷ್ಣ ಬೈರೇಗೌಡ, 2017-18 ನೇ ಸಾಲಿನಲ್ಲಿ ಖಾರಿಫ್ ಹಂಗಾಮಿನ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು, ಇದಕ್ಕೆ 15 ಸಾವಿರ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಧಿಕಾರಿಗಳು ಜಿ.ಪಿ.ಎಸ್. ಸಂಯೋಜನರೊಂದಿಗೆ ಜಮೀನಿನಲ್ಲಿ ಬೆಳದ ಬೆಳೆಗಳ ವಿವರಗಳನ್ನು ಸಂಗ್ರಹಿಸುವರು. ಈ ದತ್ತಾಂಶ ಸಂಗ್ರಹ ಕೆಲಸ ಈ ಮೊಬೈಲ್ ಆ್ಯಪ್‍ನಿಂದ ಸಾಧ್ಯ. ಇದರಿಂದ ಕನಿಷ್ಠ ಬೆಂಬಲ ಬೆಲೆ ಸೌಲಭ್ಯ ವಿವರಣೆ ಪರಿಣಾಮಕಾರಿಯಾಗಲಿದೆ. ಪ್ರಕೃತಿ ವಿಕೋಪದಲ್ಲಿ ರೈತರ ಬೆಳೆ ಪರಿಹಾರ ಬೆಳೆ ವಿಮಾ ನೀಡುವುದು, ಬೆಳೆಗಳನ್ನು ಆರ್‍ಟಿಸಿ ದಾಖಲಿಸುವಲ್ಲಿ ಸಹ ಇದು ಸಹಕಾರಿಯಾಗಿದೆ, ಇದು ರೈತರ ಸಬಲೀಕರಣಕ್ಕೆ ಹೆಚ್ಚು ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಕೆ.ಜೆ. ಜಾರ್ಜ್, ಟಿ.ಬಿ. ಜಯಚಂದ್ರ, ಸಂಸದೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ಅಪರ ಮುಖ್ಯ ಕಾರ್ಯದರ್ಶಿಗಳಾದ ವಿಜಯಭಾಸ್ಕರ್, ರತ್ನಪ್ರಭ, ಅಜಯ್ ಸೇಠ್, ಇ-ಆಡಳಿತದ ಪ್ರಧಾನ ಕಾರ್ಯದರ್ಶಿಗಳಾದ ರಾಜೀವ್ ಚಾವ್ಲಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಮಣಿವಣ್ಣನ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾದ ಡಾ. ಎಲ್.ಕೆ. ಅತೀಕ್ ಅವರು ಉಪಸ್ಥಿತರಿದ್ದರು. ವಾರ್ತಾ ಇಲಾಖೆ ನಿರ್ದೇಶಕರಾದ ಡಾ.ಪಿ.ಎಸ್.ಹರ್ಷ ವಂದನಾರ್ಪಣೆ ಸಲ್ಲಿಸಿದರು.

(ಎನ್‍ಬಿಎನ್‍)

Leave a Reply

comments

Related Articles

error: