ಪ್ರಮುಖ ಸುದ್ದಿಮೈಸೂರು

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಶಾಸಕ ಚಿಕ್ಕ ಮಾದು ಇನ್ನಿಲ್ಲ : ಗಣ್ಯರಿಂದ ಅಂತಿಮ ದರ್ಶನ

ಮೈಸೂರು,ನ.1:-  ಬಹು ಅಂಗಾಂಗ ವೈಫಲ್ಯದಿಂದ  ಬಳಲುತ್ತಿದ್ದ ಶಾಸಕ ಚಿಕ್ಕಮಾದು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

ಕೆ ಆರ್ ನಗರ ತಾ, ಹೊಸೂರು ಕಲ್ಲಲ್ಲಿ ಗ್ರಾಮದ ಶಾಸಕ ಚಿಕ್ಕ ಮಾದು ಅವರಿಗೆ (68)ವರ್ಷ ವಯಸ್ಸಾಗಿತ್ತು.  ಕಳೆದ ಮಧ್ಯರಾತ್ರಿ ಸರಿಸುಮಾರು 2 ಗಂಟೆಯಲ್ಲಿ ನಿಧನರಾಗಿದ್ದು ಆಸ್ಪತ್ರೆಯ ವೈದ್ಯರುಗಳಿಂದ ದೃಢಪಡಿಸಿದರು. ಕಳೆದ ಕೆಲವು ದಿನಗಳಿಂದ ಅರವಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಒಂದು ವರ್ಷದಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕ್ಕಮಾದು ಹಿರಿಯ ಪತ್ನಿ ಜಯಮ್ಮ, ಮತ್ತು ಕಿರಿಯ ಪತ್ನಿ ನಾಗಮ್ಮ. ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.

ಹುಣಸೂರು ತಾಲೂಕು ಹೊಸ ರಾಮೇನಹಳ್ಳಿ ಹಲವು ವರ್ಷಗಳ ಕಾಲ ವಾಸವಿದ್ದರು. ಇದಾದ ಬಳಿಕ ಮೈಸೂರಿನ ವಿಜಯನಗರ 2 ನೇ ಹಂತದಲ್ಲಿ ಪ್ರಸ್ತುತ ವಾಸವಿದ್ದರು. ಇನ್ನೂ, 1978 ರಲ್ಲಿ ರಾಜಕೀಯಕ್ಕೆ ಧುಮುಕಿದ್ದರು. ದೇವರಾಜು ಅರಸು ನೇತೃತ್ವದಲ್ಲಿ ಬಿಳಿಕೆರೆ ಕ್ಷೇತ್ರದ ಜಿ.ಪಂ ಸದಸ್ಯರಾಗಿದ್ದರು. ತದನಂತರ 1991 ರಲ್ಲಿ ಕಾಂಗ್ರೆಸ್ ನಿಂದ ಹುಣಸೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ತದನಂತರ ರಾಜಕೀಯ ಬದಲಾವಣೆಯಾಗಿ ಜಿಟಿಡಿ ನೇತೃತ್ವದಲ್ಲಿ  2007-08ರಲ್ಲಿ  ಜೆಡಿಎಸ್ ಎಂಎಲ್ಸಿಯಾಗಿ 2013 ರಲ್ಲಿ ಹೆಚ್ ಡಿ ಕ್ಷೇತ್ರದಿಂದ ಮತ್ತೆ ಶಾಸಕರಾಗಿ ಆಯ್ಕೆಯಾದರು

ದಲಿತ ಸಂಘರ್ಷ ಸಮಿತಿ ಮುಂಚೂಣಿ ನಾಯಕರಾಗಿದ್ದ ಇವರು  ಡಿ.ಎಸ್.ಎಸ್. ಸಂಸ್ಥಾಪಕ ಕೃಷ್ಣಪ್ಪ ಅವರ ಶಿಷ್ಯ. ಡಿ.ದೇವರಾಜ ಅರಸು ಅವರ ವಿರುದ್ದ 1977-78 ರಲ್ಲಿ ಡಿ.ದೇವರಾಜ ಅರಸು ವಿರುದ್ಧ ಕಣಕ್ಕೆ ತಯಾರಿ ನಡೆಸಿದ್ದರು. ಅರಸು ಅವರು ಹುಣಸೂರು ಕ್ಷೇತ್ರದ ಅಭ್ಯರ್ಥಿಯಾಗಲು ಯತ್ನಿಸಿದ ಚಿಕ್ಕಮಾದು ಅವರ ನಾಮಪತ್ರ ವಾಪಸ್ ತೆಗೆಸಿದ್ದರು. 1997-98 ರಲ್ಲಿ ಬಿಳಿಕೆರೆ ಕ್ಷೇತ್ರದಿಂದ ಜಿಲ್ಲಾ ಪರಿಷತ್ತಿಗೆ ಆಯ್ಕೆಯಾಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರೊಂದಿಗೆ ರಾಜಕೀಯ ಆರಂಭಿಸಿದ್ದರು. 1991ರಲ್ಲಿ ಪ್ರಥಮ ಚುನಾವಣೆ ಎದುರಿಸಿದ್ದು, ಹುಣಸೂರು ಉಪಚುನಾವಣೆಯಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ವಿರುದ್ಧ ಜಯ ಸಾಧಿಸಿದ್ದರು. ಜೆಡಿಎಸ್ ನಿಂದ ವಿಧಾನ ಪರಿಷತ್ತು ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದರು. ಎಂಎಲ್ಸಿ ಆಗಿದ್ದಾಗಲೇ 2913ರ ಚುನಾವಣೆ ಎದುರಿಸಿದ್ದರು. ಎಸ್.ಟಿ.ಗೆ ಮೀಸಲಾಗಿದ್ದ ಎಚ್‌.ಡಿ.ಕೋಟೆಯಿಂದ ಸ್ಪರ್ಧಿಸಿ ಜಯ ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಣ್ಣ ವಿರುದ್ಧ ಭಾರಿ ಅಂತರದಲ್ಲಿ ಗೆದ್ದು ಶಾಸಕರಾಗಿ ಆಯ್ಕೆಗೊಂಡು  ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿದ್ದರು.

ಮೈಸೂರಿನ ವಿಜಯನಗರ ಎರಡನೆ ಹಂತದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬೆಳಿಗ್ಗೆ ಹತ್ತುಗಂಟೆಗೆ ಮೈಸೂರಿನಿಂದ ಹೆಚ್ ಡಿ ಕೋಟೆಗೆ ಪಾರ್ಥಿವ ಶರೀರ ತೆರಳಲಿದೆ. ಹೆಚ್ ಡಿ ಕೋಟೆಯಲ್ಲಿ ಅಂತಿಮ ದರ್ಶನ ಮುಗಿದ ಬಳಿಕ ಹುಣಸೂರಿನಲ್ಲಿಯೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಬಿಳಿಕೆರೆಯಲ್ಲಿರುವ ಅಚರ ಸಮುದಾಯ ಭವನದಲ್ಲಿ ಕೆಲಕಾಲ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲಿಂದ ಹೊಸ ರಾಮೇನಹಳ್ಳಿಗೆ ಕೊಂಡೊಯ್ದು   ಹೊಸ ರಾಮೇನಹಳ್ಳಿಯಲ್ಲಿ ಅಂತ್ಯ ಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅಂತಿಮ ದರ್ಶನ ಪಡೆಯಲು ಜೆ ಡಿ ಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ಸಿ ಎಂ ಸಿದ್ದರಾಮಯ್ಯ  ಮೈಸೂರಿಗೆ ಆಗಮಿಸಲಿದ್ದಾರೆ. ಈಗಾಗಲೇ ಹಲವು ಗಣ್ಯರು ಅಂತಿಮ ದರ್ಶನ ಪಡೆದಿದ್ದಾರೆ.  ಇದೇ ವೇಳೆ ಹೆಚ್.ಡಿ.ಕೋಟೆ, ಹುಣಸೂರಿನಲ್ಲಿ ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: